ಬೆಂಗಳೂರು : ದುಬೈನಿಂದ ಮಂಗಳೂರಿಗೆ ಬರ್ತಿದ್ದ ಇಂಡಿಗೊ ವಿಮಾನದಲ್ಲಿ ವ್ಯಕ್ತಿಯೊಬ್ಬನ ಹುಚ್ಚಾಟತನದಿಂದ ಬೆಂಗಳೂರಲ್ಲೇ ಬಂದಿಳಿದಿದೆ. 168 ಮಂದಿ ಭಯಭೀತರಾಗಿದ್ದಾರೆ.
ವಿಮಾನದ ಬಾತ್‌ರೂಂನಲ್ಲಿ ಪೆನ್ನಿಂದ ಬಾಂಬ್ ಎಂದು ಬರೆದಿದ್ದ, ಇದನ್ನ ಕಂಡ ಪ್ರಯಾಣಿಕರು ಆತಂಕಗೊಂಡು ಗಾಬರಿಯಾಗಿದ್ದಾರೆ. ಜೀವ ಭಯದಲ್ಲಿ ಕೂಗಾಟ, ಕಿರುಚಾಟ ಕೇಳಿಬಂದಿದ್ದು, ತಕ್ಷಣ ಎಚ್ಚೆತ್ತ ವಿಮಾನ ಸಿಬ್ಬಂದಿ ಮಂಗಳೂರಿನ ಬದಲು ಬೆಂಗಳೂರಿನಲ್ಲಿಯೇ ವಿಮಾನ ಲ್ಯಾಂಡ್ ಮಾಡಿದ್ದಾರೆ. ಬಾಂಬ್ ಬೆದರಿಕೆಯಿಂದಾಗಿ ತನ್ನ ಗಮ್ಯಸ್ಥಾನವನ್ನು ಬದಲಾಯಿಸಿ ಬೆಂಗಳೂರಲ್ಲಿ ತುರ್ತು ಲ್ಯಾಂಡ್ ಮಾಡಲಾಯ್ತು ಎಂದು ವಿಮಾನ ಸಿಬ ಬಂದಿ ಹೇಳಿದ್ದಾರೆ.
ಈ ಘಟನೆ ಶನಿವಾರ ಮಧ್ಯರಾತ್ರಿ ಸಂಭವಿಸಿದೆ. ದುಬೈನಿಂದ ಹೊರಟ ಇಂಡಿಗೋ ವಿಮಾನ 6E-4814, 168 ಸಂಭವಿಸಿದೆ. ಸದ್ಯ ಯಾವುದೇ ತೊಂದರೆಯಿಲ್ಲ ಎಂದು ತಿಳಿದುಬಂದಿದೆ.