ಚಿತ್ತೂರು: ಬಹುಬೇಗ ಫೇಮಸ್ ಆಗಬೆಕೆಂಬ ಹುಚ್ಚಾಟತನದಿಂದ ಅಪಾಯಕಾರಿ ಪ್ರದೇಶದಲ್ಲಿ ರೀಲ್ಸ್ ಮಾಡಲು ಹೋಗಿ ಪ್ರಾಣಕಳೆದುಕೊಳ್ಳುತ್ತಿದ್ದಾರೆ.
ಇಂತಹದ್ದೇ ಒಂದು ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಗ್ರಾಮೀಣ ಮಂಡಲದಲ್ಲಿರುವ ರೇವು ಜಲಪಾತದಲ್ಲಿ ಸಂಭವಿಸಿದೆ.
ಯುವಕನೊಬ್ಬ ಜಲಪಾತಕ್ಕೆ ಬೀಳುವ ವಿಡಿಯೋ ಇದಾಗಿದೆ. ಜಲಪಾತಕ್ಕೆ ಬಿದ್ದ ಯುವಕ ಸಾವನ್ನಪ್ಪಿದ್ದಾರೆ. ಯುವಕ ಜಲಪಾತಕ್ಕೆ ಬೀಳುತ್ತಿದ್ದಂತೆಯೇ ಮುಳುಗಿ ಕೊಚ್ಚಿಕೊಂಡು ಹೋಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.