ಬಿಗ್ ಬಾಸ್ 12ರ ಮೊದಲ ಫಿನಾಲೆ ಕಾರ್ಯಕ್ರಮದಲ್ಲಿ ರಕ್ಷಿತಾ ಶೆಟ್ಟಿ ನೀಡಿದ ಉತ್ತರಕ್ಕೆ ಅಶ್ವಿನಿ ಗೌಡ ಬೆಚ್ಚಿಬಿದಿದ್ದಾರೆ. ಪ್ರೇಕ್ಷಕರು ಇವರು ನೀಡಿದ ಪ್ರತಿಕ್ರಿಯೆಗೆ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿರೂಪಣೆ ಮತ್ತು ಅಡುಗೆ ಟಾಸ್ಕ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಜಾಹ್ನವಿ ಅವರನ್ನು ಫೈನಲ್‌ಗೆ ಆಯ್ಕೆ ಮಾಡಿದ ವಿಚಾರದ ಬಗ್ಗೆ ಸುದೀಪ್ ಮನೆಯವರನ್ನು ಕೇಳಿದ್ದರು. ಇದಕ್ಕೆ ರಕ್ಷಿತಾ ಉತ್ತರ ನೀಡುತ್ತಾ ಅಶ್ವಿನಿ ಅವರು ಅನ್ಯಾಯದ ಆಟ ಆಡುತ್ತಿದ್ದಾರೆ. ಒಂಟಿ ಟಾಸ್ಕ್‌ನಲ್ಲಿದ್ದಾಗ ನಾನು ಧನುಷ್ ಅವರ ಆಟವನ್ನು ನೋಡಿದ್ದೇನೆ ಅವರು 70% ಪ್ರಯತ್ನ ಮಾಡಿದ್ದಾರೆ. ಅಶ್ವಿನಿ ಕೇವಲ 30% ಪ್ರಯತ್ನ ಇತ್ತು ಅಷ್ಟೇ. ಜಯಗಳಿಸಿದ ನಂತರ ಮೆಡಲ್ ಹಾಕುವಾಗ ಅವರು ಧನುಷ್ ಅವರನ್ನು ಕರೆಯುವ ಬದಲಿಗೆ ಜಾಹ್ನವಿ ಅವರನ್ನು ಕರೆದು ಮೆಡಲ್ ಹಾಕಿಸಿಕೊಂಡಿದ್ದಾರೆ. ಅವರು ಫೈನಲ್ ಆಗಬೇಕಿತ್ತು . ಆದರೆ ಎಲ್ಲರೂ ಅಶ್ವಿನಿ ಅವರ ಮಾತಿಗೆ ಧ್ವನಿಗೂಡಿಸಿದ್ದರಿಂದ ನಾನು ಹೇಳಲು ಹೋಗಿಲ್ಲ ಇದು ನ್ಯಾಯವಾದ ಆಟ ಅಲ್ಲ ಎಂದು ಖಡಕ್ ಆಗಿಯೇ ಹೇಳಿದರು.
ನಂತರ ಸುದೀಪ್ ಅಶ್ವಿನಿ ಗೌಡ ಮನೆಯಲ್ಲಿ ʼUnstoppable Leaderʼ ಹೌದೇ ಎಂಬ ಪ್ರಶ್ನೆಗೆ ರಕ್ಷಿತಾ ಅವರು ‘Unfair Leader’ ಎಂದು ಉತ್ತರ ನೀಡುವ ಮೂಲಕ ಮತ್ತೊಮ್ಮೆ ಅಶ್ವಿನಿಗೆ ಮತ್ತೇ ಶಾಕ್ ಕೊಟ್ಟರು.
ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಜಾಹ್ನವಿ ಉತ್ತಮ ಸ್ನೇಹಿತರಾಗಿದ್ದಾರೆ. ಅಷ್ಟೇ ಅಲ್ಲದೇ ರಾತ್ರಿ ಗೆಜ್ಜೆ ಧ್ವನಿಯನ್ನು ಮಾಡಿ ರಕ್ಷಿತಾ ಮಾಡುತ್ತಿದ್ದಾಳೆ ಎಂದು ಮನೆಯವರಿಗೆ ಬಿಂಬಿಸಿದ್ದರು. ಆದರೆ ಗಿಲ್ಲಿ ಮಾತ್ರ ರಕ್ಷಿತಾ ಪರವಾಗಿ ನಿಂತಿದ್ದು ಬಿಟ್ಟರೆ ಬೇರೆ ಯಾರು ನಿಂತಿರಲಿಲ್ಲ. ಹಾಗಾಗಿ ಗಿಲ್ಲಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ.