ಬೆಂಗಳೂರು: ದೇಶದ ಯುವಕ-ಯುವತಿಯರಲ್ಲಿ ಬರವಣಿಗೆ, ಭಾವನೆಗಳನ್ನು ಬರವಣಿಗೆ ಮೂಲಕ ವ್ಯಕ್ತಪಡಿಸಲು ಅವಕಾಶ ಸೇರಿ ವಿವಿಧ ದೃಷ್ಟಿಯಿಂದ ಭಾರತೀಯ ಅಂಚೆಯು ವಿಶೇಷ ಪತ್ರ ಬರವಣಿಗೆ ಸ್ಪರ್ಧೆಯನ್ನು ಏರ್ಪಡಿಸಿದೆ. ಭಾರತೀಯ ಅಂಚೆಯು “ಧೈ ಅಕ್ಷರ” ವತಿಯಿಂದ ಪತ್ರ ಬರವಣಿಗೆ ಸ್ಪರ್ಧೆ ಆಯೋಜಿಸಿದ್ದು, ವಿಜೇತರಿಗೆ 50 ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಿದೆ. ಪತ್ರ ಬರೆಯಲು ಜನವರಿ 31 ಕೊನೆಯ ದಿನವಾಗಿದೆ.
“ದಿ ಜಾಯ್ ಆಫ್ ರೈಟಿಂಗ್: ಇಂಪಾರ್ಟನ್ಸ್ ಆಫ್ ಲೆಟರ್ಸ್ ಇನ್ ಡಿಜಿಟಲ್ ಏಜ್” ಎಂಬ ವಿಷಯದ ಕುರಿತು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಪರ್ಧೆ ನಡೆಯುತ್ತಿದೆ. 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಪತ್ರ ಬರೆಯಬಹುದು. ಸ್ಪರ್ಧಿಗಳು ಬರೆದ ಪತ್ರವನ್ನು ಲಕೋಟೆ ಅಥವಾ ಅಂಚೆ ಕಾರ್ಡ್ ಗಳ ಮೂಲಕ ಮಾತ್ರ ಕಳುಹಿಸಲು ಅವಕಾಶವಿದೆ.
ಇಂಗ್ಲಿಷ್, ಹಿಂದಿ ಅಥವಾ ಯಾವುದೇ ಸ್ಥಳೀಯ ಭಾಷೆಯಲ್ಲಿ ಪತ್ರಗಳನ್ನು ಬರೆಯಹುದು. ಆಯಾ ಸರ್ಕಲ್ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಗೆ ನೀವು ಬರೆದ ಪತ್ರವನ್ನು ಕಳುಹಿಸಬೇಖು. ಸ್ಪರ್ಧೆಯಲ್ಲಿ ಭಾಗವಹಿಸುವವರ ಪೂರ್ಣ ಹೆಸರು, ವಿಳಾಸ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಮತ್ತು ಶಾಲೆ ಅಥವಾ ಕಾಲೇಜು ಹೆಸರನ್ನು ನಮೂದಿಸಬೇಕು ಎಂದು ತಿಳಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ರಾಜ್ಯ ಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ಮೂರು ಬಹುಮಾನಗಳನ್ನು ನೀಡಲಾಗುವುದು. ಆಯ್ಕೆಯಾದ ಅತ್ಯುತ್ತಮ ಪತ್ರಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ 25 ಸಾವಿರ ರೂ., 10 ಸಾವಿರ ರೂ. ಮತ್ತು5 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ.
ರಾಷ್ಟ್ರ ಮಟ್ಟದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಲ್ಲಿ ಆಯ್ಕೆಯಾದ ಅತ್ಯುತ್ತಮ ಪತ್ರಗಳಿಗೆ 50 ಸಾವಿರ ರೂ. , 25 ಸಾವಿರ ರೂ. ಮತ್ತು 10 ಸಾವಿರ ರೂ. ನಗದು ನೀಡಲಾಗುತ್ತದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಪಡೆಯಲು ಹೆಚ್ಚಿನ ಮಾಹಿತಿಗಾಗಿ https://www.indiapost.gov.in/api/documents/file/U2FsdGVkX14QwWi8dSOZVLOxhv_ehYXFddJ5nDVD19xsHjD5zAnOdtKHZqIXexhewAkz6fByDiulJnqD4x7xA ಭೇಟಿ ನೀಡಬಹುದು.