ಕಾಂತಾರ ಚಾಪ್ಟರ್-1 ಸಿನಿಮಾ ಬಾಕ್ಸಾಫೀಸ್‍ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಎರಡು ವಾರಗಳಲ್ಲಿ 700ಕೋಟಿ ಕ್ಲಬ್ ಸೇರಿರುವ ಕಾಂತಾರ ಯಶಸ್ಸಿನ ನಾಗಾಲೋಟವನ್ನು ಮುಂದುವರೆಸಿದೆ. ಈ ಬೆನ್ನಲ್ಲೇ ನಟ ರಿಷಬ್ ಶೆಟ್ಟಿ ಕಾಶಿ ಯಾತ್ರೆ ಕೈಗೊಂಡಿದ್ದಾರೆ.
ವಾರಾಣಾಸಿಯಲ್ಲಿ ನಡೆದ ಗಂಗಾರತಿಯಲ್ಲಿ ಪಾಲ್ಗೊಂಡು ಅವರು ಗಂಗಾರತಿ ನೆರವೇರಿಸಿದ್ದಾರೆ. ಇತ್ತೀಚೆಗೆ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವಿ ಚಾಮುಂಡೇಶ್ವರಿ ಆಶೀರ್ವಾದ ಪಡೆದಿದ್ದರು.
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ತೆರೆಕಂಡ ದಿನದಿಂದ ಈವರೆಗೂ ಅದ್ಭುತವಾಗಿ ಕಲೆಕ್ಷನ್ ಮಾಡುತ್ತಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದಲ್ಲಿ ಮೂಡಿಬಂದ ಕಾಂತಾರ ಸಿನಿಮಾ ಯಶಸ್ವಿ ಮೂರನೇ ವಾರದಲ್ಲೂ ಪ್ರೇಕ್ಷಕರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಈ ಹಿನ್ನೆಲೆ ಕಾಂತಾರ ಚಿತ್ರತಂಡ ಹಾಗೂ ರಿಷಬ್ ಶೆಟ್ಟಿ ದೇವರ ದರ್ಶನ ಪಡೆಯುತ್ತಿದೆ.
ಉತ್ತರದಲ್ಲಿ ತೀರ್ಥಯಾತ್ರೆ ಕೈಗೊಂಡಿರುವ ರಿಷಬ್ ಶೆಟ್ಟಿ ಕಾಂತಾರದ ಗೆಲುವಿನ ನಗೆ ಬೀರುತ್ತಿದ್ದಾರೆ. ಹೋದ ಕಡೆಗೆಲ್ಲ ರಿಷಬ್ ಶೆಟ್ಟಿಗೆ ಅದ್ಧೂರಿಯಾದ ಸ್ವಾಗತ, ಅಭಿಮಾನದ ಹೊಳೆ ಹರಿಯುತ್ತಿದೆ. ಕಾಂತಾರ ಇನ್ನೇನೂ ಕೆಲವೇ ದಿನಗಳಲ್ಲಿ 1000 ಕೋಟಿ ಕಲೆಹಾಕುವ ನಿರೀಕ್ಷೆ ಇದೆ.