ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ರೆಪೊ ದರ ಇಳಿಕೆ ಮಾಡಿರುವ ಕಾರಣ ದೇಶದ ಬಹುತೇಕ ಬ್ಯಾಂಕ್ ಗಳು ಎಫ್ ಡಿ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿವೆ. ಷೇರು ಮಾರುಕಟ್ಟೆಯೂ ಏರಿಳಿತ ಕಾಣುತ್ತಿರುವ ಕಾರಣ ಜನ ಹೂಡಿಕೆ ಬಗ್ಗೆ ಹೆಚ್ಚು ಯೋಚಿಸುವಂತಾಗಿದೆ. ಆದರೆ, ಪೋಸ್ಟ್ ಆಫೀಸಿನ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಯೋಜನೆಯು ಬ್ಯಾಂಕ್ ಎಫ್ ಡಿಗಿಂತ ಹೆಚ್ಚಿನ ರಿಟರ್ನ್ಸ ನೀಡುತ್ತದೆ.
ಹೌದು, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಯೋಜನೆ ಅಡಿಯಲ್ಲಿ ನಿಮಗೆ ವರ್ಷಕ್ಕೆ ಶೇ.7.7ರಷ್ಟು ಬಡ್ಡಿಯ ಲಾಭ ದೊರೆಯುತ್ತದೆ. ಯಾವುದೇ ಬ್ಯಾಂಕಿನಲ್ಲಿ ಎಫ್ ಡಿ ಇರಿಸಿದರೆ ನಿಮಗೆ ಶೇ.6.5-7ರಷ್ಟು ಬಡ್ಡಿ ಮಾತ್ರ ಸಿಗುತ್ತದೆ. ಆದರೆ, ಪೋಸ್ಟ್ ಆಫೀಸಿನ NSC ಯೋಜನೆಯಲ್ಲಿ ಹೆಚ್ಚಿನ ಲಾಭ ಸಿಗುತ್ತದೆ.
ಹೇಗಿರಲಿದೆ ರಿಟರ್ನ್ಸ್?
ಪೋಸ್ಟ್ ಆಫೀಸಿನ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ನೀವು 5 ವರ್ಷಗಳವರೆಗೆ 10 ಲಕ್ಷ ರೂಪಾಯಿ ಠೇವಣಿ ಇರಿಸಿದರೆ ನಿಮಗೆ 4.49 ಲಕ್ಷ ರೂಪಾಯಿ ಬಡ್ಡಿಯ ಲಾಭ ಸಿಗುತ್ತದೆ. ನೀವು ಹೂಡಿಕೆ ಮಾಡಿದ 10 ಲಕ್ಷ ರೂಪಾಯಿಗೆ ಶೇ.7.7ರ ಬಡ್ಡಿದರದಂತೆ 4,49,034 ರೂಪಾಯಿ ಲಾಭ ಸಿಗುತ್ತದೆ. ಇದರಿಂದಾಗಿ ನಿಮಗೆ 5 ವರ್ಷದಲ್ಲಿ ಒಟ್ಟು 14,49,034 ರೂಪಾಯಿ ಲಭಿಸುತ್ತದೆ.
ಪೋಸ್ಟ್ ಆಫೀಸಿನ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅನ್ವಯ ತೆರಿಗೆ ಲಾಭವೂ ಸಿಗಲಿದೆ. ಇದು ಕೇಂದ್ರ ಸರ್ಕಾರದ ಬೆಂಬಲವಿರುವ ಹೂಡಿಕೆ ಯೋಜನೆಯಾಗಿರುವ ಕಾರಣ ಹೂಡಿಕೆದಾರರಿಗೆ ಸುರಕ್ಷಿತವೂ ಆಗಿದೆ.
ಗಮನಿಸಿ: ಕೇಂದ್ರ ಸರ್ಕಾರದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಹೂಡಿಕೆ ಬಗ್ಗೆ ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಲೇಖನವನ್ನು ಪ್ರಕಟಿಸಲಾಗಿದೆ. ನೀವು ಹೂಡಿಕೆ ಮಾಡಲು ಇದು ಶಿಫಾರಸು ಅಲ್ಲ. ಯಾವುದೇ ರೀತಿಯ ಹೂಡಿಕೆಗೂ ಮುನ್ನ ತಜ್ಞರ ಸಲಹೆ-ಸೂಚನೆ ಪಡೆಯಿರಿ.