ಬೆಂಗಳೂರು : ಖಾಸಗಿ ಬಸ್ಸೊಂದು ಚಲಿಸುತ್ತಿದ್ದ ವೇಳೆ ಟಯರ್ ಬ್ಲಾಸ್ಟ್ ಆಗಿ ಏಕಾಏಕಿ ಬೆಂಕಿ ಹೊತ್ತುಕೊಂಡಿದೆ. ಅದೃಷ್ಟಾವಶಾತ್ ಬಸ್ಸಿನಲ್ಲಿದ್ದ 36 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರು ಘಟನೆ ಬೆಂಗಳೂರಿನಿಂದ ರಾಯಚೂರಿಗೆ ಹೊರಟಿದ್ದ ವೇಳೆ ಅನಂತಪುರ ಹೈವೇನಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಮಧ್ಯರಾತ್ರಿ 2:30ರ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಎಸಿ ಬಸ್ ಆಗಿದ್ದರಿಂದ ಉಸಿರುಗಟ್ಟಿ ಪ್ರಯಾಣಿಕರು ಅಸ್ತವ್ಯಸ್ತರಾಗಿದ್ದಾರೆ. ಬಸ್ ಹತ್ತುವಾಗಲೇ ಒರ್ವ ಮಹಿಳೆ ಬೆಂಕಿ ವಾಸನೆ ಕಂಡು ಡ್ರೈವರ್ ಗೆ ಹೇಳಿದ್ದರು ಆದರೂ ಅವರ ಮಾತನ್ನು ನಿರ್ಲಕ್ಷಿಸಿ ಬಸ್ ಚಲಿಸಿದ್ದನು. ಬಸ್ಸಿನಲ್ಲಿ ಹಬ್ಬಕ್ಕೇಂದು ಊರಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿದ್ದು, ಅವರ ಪ್ರಮಾಣ ಪತ್ರ, ದುಬಾರಿ ವಸ್ತುಗಳು ಸುಟ್ಟು ಭಸ್ಮಗೊಂಡಿವೆ ಎಂದು ತಿಳಿದು ಬಂದಿದೆ.