ಬೆಂಗಳೂರು: ಕರ್ನಾಟಕ ಸರ್ಕಾರದ ಸಂಸ್ಥೆಯಲ್ಲಿ ಕೆಲಸ ಮಾಡಬೇಕು ಎಂದು ಬಯಸುತ್ತಿರುವವರಿಗೆ ಶುಭ ಸಮಾಚಾರ ಸಿಕ್ಕಿದೆ. ಚಿಕ್ಕಮಗಳೂರಿನಲ್ಲಿರುವ ರಾಜ್ಯ ಸರ್ಕಾರದ ಡಿಸ್ಟ್ರಿಕ್ಟ್ ಸರ್ವೇ ಯೂನಿಟ್ ನಲ್ಲಿ ಖಾಲಿ ಇರುವ 12 ಹುದ್ದೆಗಳ ನೇಮಕಾತಿಗಾಗಿ (District Survey Unit Chikkamagaluru Recruitment 2025) ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಫ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ನೇಮಕಾತಿ ಸಂಸ್ಥೆ: ಡಿಸ್ಟ್ರಿಕ್ಟ್ ಸರ್ವೇ ಯೂನಿಟ್
ಒಟ್ಟು ಹುದ್ದೆಗಳು: 12
ಉದ್ಯೋಗ ಸ್ಥಳ: ಚಿಕ್ಕಮಗಳೂರು
ಅರ್ಜಿ ಸಲ್ಲಿಕೆ ವಿಧಾನ: ಆಫ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನವೆಂಬರ್ 3
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಿಂದ ಪಿಯುಸಿ, ಡಿಪ್ಲೋಮಾ, ಸಿಎ, ಎಂಬಿಬಿಎಸ್, ಎಂಬಿಎ, ಎಂಡಿ, ಎಂ.ಕಾಂ ಕೋರ್ಸ್ ಗಳನ್ನು ಮುಗಿಸಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 40-50 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಯಾವ ಹುದ್ದೆ ಎಷ್ಟು ಖಾಲಿ?
ಕನ್ಸಲ್ಟಂಟ್ ಮೆಡಿಸಿನ್- 02
ಮಲ್ಟಿ ರಿಹ್ಯಾಬಿಲೇಷನ್ ವರ್ಕರ್- 04
ಕಾರ್ಡಿಯಾಲಜಿಸ್ಟ್- 01
ಡಿಸ್ಟ್ರಿಕ್ಟ್ ಫೈನಾನ್ಶಿಯಲ್ ಆ್ಯಂಡ್ ಲಾಜಿಸ್ಟಿಕ್ ಅಡ್ವೈಸರ್- 01
ಕೌನ್ಸಿಲರ್ಸ್- 01
ಫಿಜಿಶಿಯನ್- 03
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ chikkamagaluru.nic.inವೆಬ್ ಸೈಟ್ ಗೆ ಭೇಟಿ ನೀಡಿ, ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ನಂತರ ಈ ಕೆಳಗಿನ ವಿಳಾಸಕ್ಕೆ ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಬೇಕಾದ ವಿಳಾಸ: District Survey Unit, District Hospital Avarana, Chikkamagaluru.