ಚಿತ್ರದುರ್ಗ : ಚಿತ್ರದುರ್ಗ ಡಿಡಿಪಿಐ ಕಚೇರಿಯ ಒರ್ವ ಸಿಬ್ಬಂದಿ ಕಾರು ಖರೀದಿ ಮಾಡಿದ ಸಂಭ್ರಮದಲ್ಲಿ ಕಚೇರಿಯಲ್ಲೇ ಎಣ್ಣೆ ಪಾರ್ಟಿ ಮಾಡಿದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಮದ್ಯ ಬೆರೆಸಿದ್ದ ವಾಟರ್ಕ್ಯಾನ್ ಕಚೇರಿಗೆ ತಂದಿದ್ದ ಸಿಬ್ಬಂದಿ, ಕಚೇರಿಯಲ್ಲೇ ಕುಡಿದು ಮೋಜು ಮಸ್ತಿ ಮಾಡಿದ್ದಾರೆ. ಸಿಬ್ಬಂದಿ ಮದ್ಯದ ಪಾರ್ಟಿಗೆ ಸರ್ಕಾರಿ ಕಚೇರಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಡಿಡಿಪಿಐ ಮಂಜುನಾಥ್ ಕಾರು ಚಾಲಕ ಮತ್ತಿತರ ಸಿಬ್ಬಂದಿ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಡಿಪಿಐ ಕಚೇರಿಯಲ್ಲೇ ಸಿಬ್ಬಂದಿ ಕುಡಿದು ಮೋಜು ಮಸ್ತಿ ಮಾಡಿರುವ ವೀಡಿಯೋ ವೈರಲ್ ಆದ ಪರಿಣಾಮ ಜಿಲ್ಲೆಯಾದ್ಯಂತ ಭಾರೀ ಜನಾಕ್ರೋಶ ವ್ಯಕ್ತವಾಗಿದೆ.