ಬೆಂಗಳೂರು : ಬಡವರು ಮತ್ತು ಮಧ್ಯಮ ವರ್ಗದ ಬೆಂಗಳೂರು ನಿವಾಸಿಗಳಿಗೆ ರಾಜ್ಯ ಸರ್ಕಾರವು ದೀಪಾವಳಿ ಹಿನ್ನಲೆ ಒಸಿ ವಸತಿ ಕಟ್ಟಡಗಳ ಸ್ವಾದೀನ ಪತ್ರಕ್ಕೆ ವಿನಾಯಿತಿ ನೀಡುವುದಾಗಿ ಘೋಷಣೆ ಮಾಡಿ ಸಿಹಿ ಸುದ್ದಿಯೊಂದನ್ನು ನೀಡಿದೆ.
1,200 ಚದರ ಅಡಿವರೆಗಿನ ನಿವೇಶನ, 3 ಅಂತಸ್ತು ಒಸಿ ವಸತಿ ಕಟ್ಟಡಗಳಿಗೆ ಮಾತ್ರ ವಿನಾಯಿತಿ ನೀಡುವುದಾಗಿ ನಗರಾಭಿವೃದ್ಧಿ ಇಗಾಗಲೇ ಇಲಾಖೆಯಿಂದ ಅಧಿಕೃತ ಆದೇಶ ಪ್ರಕಟಗೊಂಡಿದೆ. ಜಿಬಿಎ ಆಡಳಿತ ಕಾಯ್ದೆ–2024ರ ಕಲಂ 241(7)ರಂತೆ ಸರ್ಕಾರ ಆದೇಶ ನೀಡಿದೆ.
ಈ ವಿನಾಯಿತಿಯು ನೆಲ ಮತ್ತು 2 ಅಂತಸ್ತು ಅಥವಾ ಸ್ಟಿಲ್ಟ್ ಮತ್ತು 3 ಅಂತಸ್ತಿನ ಕಟ್ಟಡಗಳಿಗೆ ಇದು ಅನ್ವಯಿಸುತ್ತದೆ. ಒಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರು ಸಂಪರ್ಕ ನೀಡದಂತೆ ಸುಪ್ರೀಂ ಕೋರ್ಟ್ ಆದೇಶ ಹೊಡಸಿತು ಅಂತೆಯೇ ಒಸಿ ಇರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್ , ನೀರು ಸಂಪರ್ಕ ದೊರೆಯುತ್ತದೆ.

ಏನಿದು ಸ್ವಾಧೀನಾನುಭವ ಪತ್ರ ?
- ಕಟ್ಟಡಗಳಿಗೆ ಸ್ಥಳೀಯ ಸಂಸ್ಥೆಗಳಿಂದ ನೀಡುವ ಪತ್ರ
- ಸ್ಥಳೀಯ ಸಂಸ್ಥೆಗಳು ನೀಡುವ ಕಾನೂನುಬದ್ಧ ದಾಖಲೆ
- ಅನಧಿಕೃತ ಕಟ್ಟಡ, ನಕ್ಷೆ ಉಲ್ಲಂಘಿಸಿದ ಕಟ್ಟಡಗಳಿಗೆ ಒಸಿ ನೀಡುವುದಿಲ್ಲ
- ಒಸಿ ಇಲ್ಲದಿದ್ರೆ ವಿದ್ಯುತ್ ಮತ್ತು ನೀರು, ಒಳಚರಂಡಿ ಸಂಪರ್ಕ ಸಿಗುವುದಿಲ್ಲ
ಅನುಕೂಲಗಳೇನು?
- ಸಣ್ಣ ನಿವೇಶನದ ಮನೆ ಮಾಲೀಕರಿಗೆ ಅನುಕೂಲ
- ಅನುಮತಿ ಇಲ್ಲದೆ ಮನೆ ನಿರ್ಮಿಸಿದ್ದ ಮಾಲೀಕರಿಗೆ ಅನುಕೂಲ
- ಮನೆ ಮಾರಾಟ ಅಥವಾ ಬ್ಯಾಂಕ್ ಸಾಲಕ್ಕೂ ಅನುಕೂಲ
- ಅನಧಿಕೃತ ಕಟ್ಟಡಗಳು ಅಧಿಕೃತವಾಗುತ್ತೆ
- ನೆಲ + 2 ಅಂತಸ್ತುಗಳು, ಅಥವಾ ಸ್ಟಿಲ್ಟ್ (parking) + 3 ಅಂತಸ್ತುಗಳು ಇರುವ ಕಟ್ಟಡಗಳಿಗೆ ಮಾತ್ರ ಅನ್ವಯ
- ಮನೆ ಖರೀದಿಸಲು ಬಯಸುವವರಿಗೂ ಸಹಾಯ
- ಒಸಿ ಇಲ್ಲದೆ ನಿರ್ಮಿಸಲಾದ ಅನೇಕ ಸಣ್ಣ ಮನೆಗಳು ಕಾನೂನು ಬದ್ಧವಾಗಬಹುದು
ಅನಾನುಕೂಲಗಳೇನು?
- ನಿಯಮ ಉಲ್ಲಂಘನೆಯಾಗುವ ಸಾಧ್ಯತೆ
- ಚಿಕ್ಕ ನಿವೇಶನಗಳ ಮೇಲೆ ಹೆಚ್ಚು ಅಂತಸ್ತು ಕಟ್ಟಡಗಳ ನಿರ್ಮಾಣ ಸಾಧ್ಯತೆ
- ಗುಣಮಟ್ಟ ಇಲ್ಲದ ಕಟ್ಟಡಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ