ಬೆಂಗಳೂರು : ಬಿಜೆಪಿ ಉಚ್ಚಾಟಿತ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು (ಮಂಗಳವಾರ) ಹಾಸನಾಂಬ ದೇವಿಯ ದರ್ಶನ ಪಡೆದಿದ್ದಾರೆ.
ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ-ಬಿಟಿ ಪ್ರಿಯಾಂಕ್ ಖರ್ಗೆಗೆ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ತಾಕತ್ತಿದ್ದರೆ ಅಕ್ರಮವಾಗಿ ಕಟ್ಟಿಕೊಂಡಿರೋ ಮಸೀದಿ, ಮದರಸಗಳನ್ನು ಮೊದಲು ತೆರವು ಮಾಡಲಿ, ಸಂಘವನ್ನು ರದ್ದು ಮಾಡೋಕೆ ಸಾಧ್ಯವೇ ಇಲ್ಲ. ಶಾಖೆಯಲ್ಲಿ ಏನು ಹೇಳ್ತಾರೆ.. ದೇಶದ ಬಗ್ಗೆ ಹೇಳ್ತಾರೆ. ಬಿ.ಕೆ ಹರೀಪ್ರಸಾದ್, ಸಿದ್ದರಾಮಯ್ಯ ಇವ್ರೆಲ್ಲಾ ತಾಲಿಬಾನ್ ಬಚ್ಚಾಗಳು. ಕರಿ ಟೋಪಿ ಬಾ ಅಂತ ಕರೆಯೋ ಡಿಕೆ ಶಿವಕುಮಾರ್, ಜಮೀರ್ ಅಹಮ್ಮದ್ ಖಾನ್ ಅವರನ್ನ ತಾಕತ್ ಇದ್ದರೆ ಏ ಚಾಯ್ ಟೋಪಿ ಬಾ ಅಂತ ಕರಿಲಿ ಎಂದು ಗುಡುಗಿದ್ದಾರೆ.
ಸಿದ್ದರಾಮಯ್ಯ, ಜಮೀರ್ ಇವ್ರೆಲ್ಲಾ ಸೇರಿ ಏನು ಮಾಡೋಕೆ ಹೊರಟಿದ್ದಾರೆ? 2028ಕ್ಕೆ ಜನ ಉತ್ತರ ಕೊಡ್ತಾರೆ. ಪ್ರಿಯಾಂಕ್ ಖರ್ಗೆ ನೀವು ಅಂಬೇಡ್ಕರ್ ಶಿಷ್ಯರಲ್ಲ, ನೀವೆಲ್ಲಾ ನೆಹರು ಶಿಷ್ಯರು. ನೆಹರು ದೇಶಕ್ಕೆ ಏನು ಕೊಟ್ಟಿಲ್ಲ, ನೆಹರು ಅವರಿಂದ ಸ್ವಾತಂತ್ರ್ಯ ಸಿಕ್ಕಿಲ್ಲ ಅಂತ ಅಂಬೇಡ್ಕರ್ ಅವರೇ ಹೇಳಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.