ಬೆಂಗಳೂರು : ನಮ್ಮ ಮೆಟ್ರೋ ಬೆಂಗಳೂರಿಗರ ಪಾಲಿಗೆ ವರವಾಗಿದೆ. ಟಿಕೆಟ್ ಬೆಲೆ ಹೆಚ್ಚು ಅನ್ನೋದನ್ನ ಬಿಟ್ರೆ ಆರಾಮದಾಯಕ ಪ್ರಯಾಣಕ್ಕೆ ಉತ್ತಮ ಆಯ್ಕೆಯಾಗಿದೆ. ಸಿಲಿಕಾನ್ ಸಿಟಿ ಮಂದಿ ಟ್ರಾಫಿಕ್ ಜಾಮ್ನಿಂದ ತಪ್ಪಿಸಿಕೊಳ್ಳಲು ಮೆಟ್ರೋ ಹತ್ತೋದೆ ಬೆಸ್ಟ್ ಅಂತಿದ್ದಾರೆ.
ಆದ್ರೆ ಇದೀಗ ಮೆಟ್ರೋ ಪ್ರಯಾಣಕರೊಬ್ಬರು ಪೋಸ್ಟ್ ಮಾಡಿರೋ ವಿಡಿಯೋ ಒಂದನ್ನು ನೋಡಿ ಜನರು ಶಾಕ್ ಆಗಿದ್ದಾರೆ. ಮೆಟ್ರೋದಲ್ಲಿ ಭಿಕ್ಷಾಟನೆಗೂ ಅವಕಾಶವಿದ್ಯಾ ಎಂದು ಪ್ರಶ್ನೆ ಮಾಡ್ತಿದ್ದಾರೆ. ಸಾಮಾನ್ಯವಾಗಿ ಭಿಕ್ಷುಕರು ದೇವಸ್ಥಾನಗಳಲ್ಲಿ, ಟ್ರಾಫಿಕ್ ಸಿಗ್ನಲ್ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಕಾಣಿಸಿಕೊಳ್ತಾರೆ. ಕೆಲವೊಮ್ಮೆ ಬಸ್ಗಳಲ್ಲೂ ಭಿಕ್ಷೆ ಬೇಡ್ತಾರೆ. ಆದ್ರೆ ಇದೀಗ ಮೆಟ್ರೋದಲ್ಲಿ ಭಿಕ್ಷುಕರು ಕಾಣಿಸಿಕೊಂಡಿದ್ದನ್ನು ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪ್ರಯಾಣಿಕರೊಬ್ಬರು ವಿಡಿಯೋ ಪೋಸ್ಟ್ ಮಾಡಿದ್ದು, ಈ ವಿಡಿಯೋದಲ್ಲಿ ನಮ್ಮ ಮೆಟ್ರೋ ಹಸಿರು ಮಾರ್ಗದ ಟ್ರೈನ್ನಲ್ಲಿ ವ್ಯಕ್ತಿಯೋರ್ವ ಭಿಕ್ಷೆ ಬೇಡುತ್ತಿರುವುದನ್ನ ಕಾಣಬಹುದು.
ಭಿಕ್ಷೆ ಬೇಡುತ್ತಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ನಮ್ಮ ಮೆಟ್ರೋ ನಡೆಗೆ ಮೆಟ್ರೋ ಪ್ರಯಾಣಿಕರು ಅಸಮಧಾನ ಹೊರಹಾಕಿದ್ದಾರೆ. ಟ್ರಾಫಿಕ್ ಸಿಗ್ನಲ್, ಬಸ್ ನಿಲ್ದಾಣ ಆಯ್ತು, ಇದೀಗ ಭಿಕ್ಷುಕರು ಮೆಟ್ರೋದಲ್ಲೂ ತಮ್ಮ ಕಾಯಕ ಮಾಡ್ತಿದ್ದಾರೆ ಎಂದು ಕಮೆಂಟ್ನಲ್ಲೇ ಕಿಡಿಕಾರುತ್ತಿದ್ದಾರೆ.. ಆದ್ರೆ ಈ ಬಗ್ಗೆ ಇನ್ನೂ ಬಿಎಂಆರ್ಸಿಎಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.