ಬೆಂಗಳೂರು: ಕೇಂದ್ರ ಸರ್ಕಾರದ ಸಂಸ್ಥೆಯಾಗಿ ಕಾರ್ಯನಿರ್ವಹಿಸುವ ಪ್ರಸಾರ ಭಾರತಿ ಸಂಸ್ಥೆಯಲ್ಲಿ ಖಾಲಿ ಇರುವ 59 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಬ್ರಾಡ್ ಕಾಸ್ಟ್ ಎಕ್ಸಿಕ್ಯೂಟಿವ್, ಕಾಪಿ ರೈಟರ್, ಆ್ಯಂಕರ್ ಸೇರಿ ಹಲವು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 21 ಕೊನೆಯ ದಿನವಾಗಿದೆ.
“ಹುದ್ದೆಗಳ ಸಂಕ್ಷಿಪ್ತ ವಿವರ”
ನೇಮಕಾತಿ ಸಂಸ್ಥೆ: ಪ್ರಸಾರ ಭಾರತಿ
ಒಟ್ಟು ಹುದ್ದೆಗಳು: 59
ಹುದ್ದೆಗಳ ಹೆಸರು: ಬ್ರಾಡ್ ಕಾಸ್ಟ್ ಎಕ್ಸಿಕ್ಯೂಟಿವ್, ಕಾಪಿ ರೈಟರ್, ಆ್ಯಂಕರ್, ಬುಲೆಟಿನ್ ಎಡಿಟರ್, ವೀಡಿಯೊಗ್ರಾಫರ್ ಇತ್ಯಾದಿ
ಉದ್ಯೋಗ ಸ್ಥಳ: ಬೆಂಗಳೂರು ಸೇರಿ ದೇಶದ ಹಲವೆಡೆ
“ವಿದ್ಯಾರ್ಹತೆ ಏನು?”
ಪಿಯುಸಿ, ಯಾವುದೇ ವಿಷಯದಲ್ಲಿ ಪದವಿ, ಡಿಪ್ಲೋಮಾ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ಪತ್ರಿಕೋದ್ಯಮ ಪದವಿ ಪೂರ್ಣಗೊಳಿಸಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಗಿದೆ. ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾದ ಪ್ರಸಾರ ಭಾರತಿ ಕಚೇರಿಗಳಲ್ಲಿ ಕೆಲಸ ಮಾಡಲು ಬಯಸುವವರು ಅರ್ಜಿ ಸಲ್ಲಿಸಬಹುದು.
ಬ್ರಾಡ್ ಕಾಸ್ಟ್ ಎಕ್ಸಿಕ್ಯೂಟಿವ್ ಮತ್ತು ಕಾಪಿ ರೈಟರ್ ಹುದ್ದೆಗಳಿಗೆ ಕನಿಷ್ಠ ಎರಡು ರಿಂದ ಮೂರು ವರ್ಷದ ಮಾಧ್ಯಮ ಕ್ಷೇತ್ರದ ಅನುಭವದ ಅಗತ್ಯವಿದೆ. ಟೆಲಿವಿಷನ್, ರೇಡಿಯೋ, ಡಿಜಿಟಲ್ ಮೀಡಿಯಾ ಅಥವಾ ಪಬ್ಲಿಕ್ ರಿಲೇಷನ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವಸ್ಥರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 25 ಸಾವಿರ ರೂ.ನಿಂದ 80 ಸಾವಿರ ರೂ.ವರೆಗೆ ಸಂಬಳ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವವರು prasarbharati.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.