ಉಡುಪಿ : ಕನ್ನಡ ಚಲನಚಿತ್ರ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಂದು (ಸೋಮವಾರ) ಉಡುಪಿಯ ಪ್ರಸಿದ್ಧ ಕೃಷ್ಣ ಮಠಕ್ಕೆ ಭೇಟಿ ನೀಡಿ ಪೊಡವಿಗೊಡೆಯನ ದರ್ಶನವನ್ನು ಪಡೆದಿದ್ದಾರೆ.

ಬಳಿಕ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥರನ್ನು ಭೇಟಿಯಾಗಿ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಹಾಗೂ ಅನುಗ್ರಹ ಮಂತ್ರಾಕ್ಷತೆ ಪಡೆದ ಧ್ರುವ ಸರ್ಜಾ, ದೇವರ ದರ್ಶನಕ್ಕೆ ಬಂದಂತಹ ಭಕ್ತಾದಿಗಳಿಗೆ ಸೆಲ್ಫೀ ನೀಡಿದ್ದಾರೆ.