ಬೆಂಗಳೂರು: ಎಚ್‌ಡಿಎಫ್‌ಸಿ ಬ್ಯಾಂಕಿನ ಪರಿವರ್ತನ್ ಇಸಿಎಸ್ಎಸ್ ಯೋಜನೆ ಅನ್ವಯ 2025-26ನೇ ಶೈಕ್ಷಣಿಕ ವರ್ಷದಲ್ಲಿ ದೇಶಾದ್ಯಂತ ಇರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಘೋಷಿಸಿದೆ. ಒಂದನೇ ತರಗತಿಯಿಂದ ವೃತ್ತಿ ಪರ ಕೋರ್ಸ್‌ಗಳನ್ನು ಅಧ್ಯಯನ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ (HDFC Parivartan ECSS Programme 2025-26) ವರ್ಷಕ್ಕೆ 15 ಸಾವಿರ ರೂ.ನಿಂದ 75 ಸಾವಿರ ರೂ.ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಇದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಮಾಹಿತಿ ಇಲ್ಲಿದೆ. ಅರ್ಜಿ ಸಲ್ಲಿಸಲು ಅ.30 ಕೊನೆಯ ದಿನವಾಗಿದೆ.
“ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೇನು?”
ಭಾರತೀಯ ಪ್ರಜೆಯಾಗಿರಬೇಕು
1ರಿಂದ 12ನೇ ತರಗತಿ, ಡಿಪ್ಲೋಮಾ, ಐಟಿಐ, ಪಾಲಿಟೆಕ್ನಿಕ್, ಪದವಿ, ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರಬೇಕು
ಹಿಂದಿನ ಪರೀಕ್ಷೆಯಲ್ಲಿ ಶೇ.55ರಷ್ಟು ಅಂಕ ಪಡೆದಿರಬೇಕು
ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರೂ.ಗಿಂತ ಕಡಿಮೆ ಇರಬೇಕು
“ಯಾರಿಗೆ ಎಷ್ಟು ಸ್ಕಾಲರ್ ಶಿಪ್?”
1ನೇ ತರಗತಿಯಿಂದ 6ನೇ ತರಗತಿವರೆಗೆ – 15,000 ರೂ.
7 ರಿಂದ 12, ಡಿಪ್ಲೋಮಾ, ಐಟಿಐ, ಪಾಲಿಟೆಕ್ನಿಕ್- 18,000 ರೂ.
ಪದವಿ- 30 ಸಾವಿರ ರೂ.
ಸ್ನಾತಕೋತ್ತರ ಪದವಿ- 35 ಸಾವಿರ ರೂ.
ವೃತ್ತಿಪರ ಕೋರ್ಸ್- 75 ಸಾವಿರ ರೂ.
“ಅರ್ಜಿ ಸಲ್ಲಿಸುವುದು ಹೇಗೆ?”
ಸಲ್ಲಿಕೆಯಾದ ಅರ್ಜಿಗಳನ್ನು ಮೊದಲು ಪರಿಶೀಲನೆ ಮಾಡಲಾಗುತ್ತದೆ. ನಂತರ ದಾಖಲೆ ಪರಿಶೀಲನೆ ನಡೆಸಲಾಗುತ್ತದೆ. ಇದಾದ ಬಳಿಕವೇ ಸ್ಕಾಲರ್ ಶಿಪ್‌ಗೆ ಯಾರು ಆಯ್ಕೆಯಾಗಿದ್ದಾರೆ ಎಂಬುದರ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವವರು https://www.buddy4study.com/ ವೆಬ್‌ಸೈಟ್‌ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.