ನವದೆಹಲಿ : ಎಲ್ಲೆಡೆ ಕಾಂತಾರ ಚಾಪ್ಟರ್-1 ಸಿನಿಮಾದ ಹವಾ ಜೋರಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಕಾಂತಾರ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಕನ್ನಡ ಚಿತ್ರರಂಗವನ್ನು ಮತ್ತೊಮ್ಮೆ ಜಗತ್ತಿಗೆ ಅನಾವರಣಗೊಳಿಸಿದ್ದಕ್ಕಾಗಿ ಪ್ರೇಕ್ಷಕರು ರಿಷಭ್ ಶೆಟ್ಟಿ ಅವರನ್ನು ಶ್ಲಾಘಿಸುತ್ತಿದ್ದಾರೆ.
ಇದೀಗ ಹಿಂದಿಯ ಬಿಗ್‌ಶೋ ಕೌನ್ ಬನೆಗಾ ಕರೋಡ್‌ಪತಿ ಶೋನಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಭಾಗವಹಿಸಿದ್ದಾರೆ. ಬಿಗ್‌ಬಿ ಅಮಿತಾಬ್ ಜೊತೆ ಎರಡು ದಿನದ ಹಿಂದೆ ಕಾರ್ಯಕ್ರಮದ ಶೂಟಿಂಗ್‌ನಲ್ಲಿ ರಿಷಬ್ ಶೆಟ್ಟಿ ಭಾಗವಹಿಸಿದ್ದು, ಇಂದು (ಅ.11) ನಟ ಅಮಿತಾಬ್ ಬಚ್ಚನ್ ಅವರ ಹುಟ್ಟುಹಬ್ಬ ಹಿನ್ನೆಲೆ ಕಾಂತಾರಾ ಚಾಪ್ಟರ್-1 ಸಿನಿಮಾ ತಂಡವು ಭಾರತೀಯ ಚಿತ್ರರಂಗದ ಶಹೆನ್‌ಶಾ, ದಂತಕಥೆ ಅಮಿತಾಬ್ ಬಚ್ಚನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತದೆ. ಕೌನ್ ಬನೇಗಾ ಕರೋಡ್‌ಪತಿ ಮುಂಬರುವ ಸಂಚಿಕೆಗಾಗಿ ಉತ್ಸುಕನಾಗಿದ್ದೇನೆ. ನಿಮ್ಮೊಂದಿಗೆ ಸೇರಲು ತುಂಬಾ ಸಂತೋಷವಾಗಿದೆ ಎಂದು ರಿಷಬ್ ಶೆಟ್ಟಿ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
ಹಾಗೆಯೇ ಹೊಂಬಾಳೆ ಸಂಸ್ಥೆ ಕೂಡ ಕೌನ್ ಬನೆಗಾ ಕರೋಡ್‌ಪತಿ ಶೋನಲ್ಲಿ ರಿಷಬ್ ಭಾಗಿಯಾಗಿ ನಟ ಅಮಿತಾಬ್ ಬಚ್ಚನ್ ಅವರಿಗೆ ವಿಶ್ ಮಾಡಿದ ಪೋಟೋ ಹಂಚಿಕೊಂಡಿದೆ. `ಕೌನ್ ಬನೆಗಾ ಕರೋಡ್‌ಪತಿ’ ಶೋನಲ್ಲಿ ರಿಷಬ್ ಭಾಗಿಯಾದ ಎಪಿಸೋಡ್ ಸದ್ಯದಲ್ಲಿಯೇ ಪ್ರಸಾರವಾಗಲಿದೆ.
ಸದ್ಯ ಕಾಂತಾರ ಚಾಪ್ಟರ್-1 ಸಿನಿಮಾ ವಿಶ್ವದಾದ್ಯಂತ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದ್ದು, ಬಾಕ್ಸಾಫೀಸ್‌ನಲ್ಲಿ 500 ಕೋಟಿ ಕ್ಲಬ್ ದಾಟಿದೆ. ಇನ್ನೊಂದೆಡೆ ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿರುವ ಕಾಂತಾರದ ಚಿತ್ರದ ಬಗ್ಗೆ ಪರ ವಿರೋಧ ಚರ್ಚೆಗಳು ಕೂಡ ಶುರುವಾಗಿವೆ.