ಬೆಂಗಳೂರು: ಮುಖ್ಯಮಂತ್ರಿ ಆಗುವುದಕ್ಕೆ ನನಗೆ ಆತುರ ಇಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಲಾಲ್ ಬಾಗ್‌ನಲ್ಲಿ ಬೆಂಗಳೂರು ನಡಿಗೆ ಹೆಸರಿನಲ್ಲಿ ನಡೆಸಿದ ಸಾರ್ವಜನಿಕರ ಭೇಟಿ ಕಾರ್ಯಕ್ರಮದಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಬಗ್ಗೆ ಮಾತನಾಡಿದ ಡಿಸಿಎಂ, ಮುಖ್ಯಮಂತ್ರಿ ಆಗುವುದಕ್ಕೆ ನನಗೆ ಆತುರ ಇಲ್ಲ. ಯಾರೋ ನೀವು ಸಿಎಂ ಆಗುವ ಸಮಯ ಹತ್ತಿರ ಬರಲಿ ಎಂದರು ನಾನು ಅದಕ್ಕೆ ಪ್ರತಿಕ್ರಿಯಿಸಿಲ್ಲ. ನನ್ನ ಹೇಳಿಕೆಯನ್ನು ತಿರುಚುವ ಕೆಲಸ ಆಗುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಾಧ್ಯಮಗಳಿಗೆ ಸಲಹೆ ನೀಡಿದ ಅವರು, ಯಾರೋ ನಾಗರಿಕರು ಮುಖ್ಯಮಂತ್ರಿ ಆಗುವ ಸಮಯ ಹತ್ತಿರ ಬಂತಾ ಎಂದು ಕೇಳಿದರು, ಅದಕ್ಕೆ ನಾನು ಉತ್ತರಿಸಿಲ್ಲ. ನನ್ನ ಮಾತು ಹತ್ತಿರ ಬರುತ್ತಿದೆ ಎಂದು ತಿರುಚಿ ತೋರಿಸಬೇಡಿ. ಸುಳ್ಳು ನ್ಯೂಸ್ ಕ್ರಿಯೇಟ್ ಮಾಡುತ್ತಿರಾ? ಮೀಡಿಯಾದವರು ರಾಜಕಾರಣ ಮಾಡಬೇಡಿ ಎಂದು ಹೇಳಿದ್ದಾರೆ.
ನಾನು ಮುಖ್ಯಮಂತ್ರಿ ಆಗುವ ಟೈಂ ಹತ್ತಿರ ಬಂದಿದೆ ಎಂದು ಹೇಳಿಲ್ಲ. ನನ್ನ ರಾಜ್ಯದ ಜನರಿಗೆ ಒಳ್ಳೆಯ ಕೆಲಸ ಮಾಡಲು ಹೊರಟಿದ್ದೇನೆ. ಸುಳ್ಳು ಸುದ್ದಿ ಹಾಕಿದರೆ ಮಾನನಷ್ಟ ಕೇಸ್ ಹಾಕುತ್ತೀನಿ ಎಂದು ಎಚ್ಚರಿಸಿದ್ದಾರೆ