ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್. ಉಮೇಶ್ ಅವರು ಇಂದು ಬೆಳಗ್ಗೆ ಸ್ನಾನದ ಮನೆಯಲ್ಲಿ ಕಾಲು ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಜೆ.ಪಿ ನಗರದ ನಿವಾಸದಲ್ಲಿ ಅವರು ಜಾರಿ ಬಿದ್ದಿದ್ದು, ಪರಿಣಾಮ ಉಮೇಶ್ ಅವರ ಸೊಂಟ ಹಾಗೂ ಭುಜದ ಭಾಗಕ್ಕೆ ತೀವ್ರ ಪೆಟ್ಟಾಗಿದೆ.

ಕೂಡಲೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದ್ದು,ಇಂದು ಅವರಿಗೆ ಸರ್ಜರಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
1960ರ ದಶಕದಿಂದಲೂ ಉಮೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈಗಲೂ ಕೂಡ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ನಟರಾಗಿ ನಡಿಸಿರುವ ಉಮೇಶ್ ಅವರು, ಇದೀಗ ಇಳಿ ವಯಸ್ಸಿನಲ್ಲಿ ಸೊಂಟ ಹಾಗೂ ಭುಜದ ಭಾಗಕ್ಕೆ ಏಟು ಮಾಡಿಕೊಂಡು ನರಳುವಂತಾಗಿದೆ. ಅವರು ಬೇಗ ಚೇತರಿಕೆ ಕಾಣಲಿ ಎಂದು ಆಪ್ತರು ಮತ್ತು ಅಭಿಮಾನಿಗಳು ಹಾರೈಸುತ್ತಿದ್ದಾರೆ.