ಬೆಂಗಳೂರು: ಟ್ರಾಫಿಕ್ ಸಮಸ್ಯೆ ಒಳ್ಳೆಯದು, ಇದು ಬೆಂಗಳೂರಿನ ಪ್ರಗತಿಯ ದಿಕ್ಸೂಚಿ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮೊಬೆಲಿಟೊ ಸೈಪೋಸಿಸಂ 2025 ರ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ನಾವು ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದ್ದೇವೆ. ಬೆಂಗಳೂರಿನ ಜನಸಂಖ್ಯೆಯ ಸುಮಾರು 75.5 ಪ್ರತಿಶತ ಜನರು ಕೆಲಸ ಮಾಡುವ ಜನಸಂಖ್ಯೆಯ ಭಾಗವಾಗಿದೆ. ಹಾಗೆ ನೋಡಲು ಹೋದರೆ ಟ್ರಾಫಿಕ್ ಸಮಸ್ಯೆ ಒಂದು ಲೆಕ್ಕದಲ್ಲಿ ಒಳ್ಳೆಯದೇ, ಇದರಿಂದ ನಾವು ಬೆಳೆಯುತ್ತಿದ್ದೇವೆ ಎಂಬುದನ್ನು ತೋರಿಸುತ್ತದೆ. ಆದರೂ ಟ್ರಾಫಿಕ್ ಸಮಸ್ಯೆಯನ್ನು ನಾವು ಬಗೆ ಹರಿಸಿಕೊಳ್ಳಬೇಕು ಎಂದಿದ್ದಾರೆ.
ಬೆಂಗಳೂರಿನಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿರುವ ಕಾರಣ ಅತಿ ಹೆಚ್ಚು ಸಂಖ್ಯೆಯ ವಲಸಿಗರನ್ನು ಬರುತ್ತಿದ್ದಾರೆ. ಬೆಂಗಳೂರಿನಲ್ಲಿ ಈಗ ಸುಮಾರು 82 ಲಕ್ಷ ದ್ವಿಚಕ್ರ ವಾಹನಗಳು ಮತ್ತು 25 ಲಕ್ಷ ನಾಲ್ಕು ಚಕ್ರಗಳ ವಾಹನಗಳು ಸೇರಿ ಒಟ್ಟು 1.2 ಕೋಟಿ ನೋಂದಾಯಿತ ವಾಹನಗಳಿವೆ ಎಂದು ಹೇಳಿದರು.
ಇವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಯಾಗುತ್ತಿದ್ದಂತೆ. ಪ್ರಿಯಾಕ್ ಖರ್ಗೆ ತಮ್ಮ ಪೇಜ್ ನಲ್ಲಿ ನಾವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು, ಮುಂದಿನ ದಶಕದಲ್ಲಿ ನಮ್ಮ ಜಿಡಿಪಿ ವಾರ್ಷಿಕವಾಗಿ 8.5% ಕ್ಕಿಂತ ಹೆಚ್ಚು ಬೆಳೆಯುವ ನಿರೀಕ್ಷೆಯಿದೆ. ಕಳೆದ ವರ್ಷ ಬೆಂಗಳೂರಿನ ರಸ್ತೆಗಳಿಗೆ 7 ಲಕ್ಷಕ್ಕೂ ಹೆಚ್ಚು ಹೊಸ ವಾಹನಗಳು ಇಳಿದಿವೆ. ಆಗಸ್ಟ್ 2025 ರಲ್ಲಿ 58,913 ಹೊಸ ವಾಹನಗಳನ್ನು ನೋಂದಾಯಿಸಲಾಗಿದೆ ಎಂದು ಸ್ಪಷ್ಟೀಕರಿಸಿದ್ದಾರೆ.