ಉಡುಪಿ : ಬಿಜೆಪಿ ಪಕ್ಷದಲ್ಲಿ ಒಂದು ವಿಶೇಷವಾದ ನಿರ್ಮಾ ವಾಷಿಂಗ್ ಮಿಷನ್ ಇದೆ. ಯಾವುದೇ ಭ್ರಷ್ಟಾಚಾರಿಗಳು ಅವರ ಪಕ್ಷಕ್ಕೆ ಸೇರಿದರೆ ತೊಳೆದು ಪ್ರಾಮಾಣಿಕರನ್ನಾಗಿ ಮಾಡುತ್ತಾರೆ ಎಂದು ಉಡುಪಿಯಲ್ಲಿ ಸಂತೋಷ್ ಲಾಡ್ ವ್ಯಂಗ್ಯವಾಡಿದ್ದಾರೆ.
ವರದಿಗಾರರಿಗೆ ಸ್ಪಂದಿಸಿ ಸಚಿವರು ಪ್ರತಿಕ್ರಿಯಿಸಿದರು. ಕಾಂಗ್ರೆಸ್ ಶಾಸಕ ಪಪ್ಪಿ ಮೇಲೆ ಇಡಿ ದಾಳಿ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂತೋಷ್ ಲಾಡ್, “ಅಜಿತ್ ಪವಾರ್ ಮೇಲೆ 60 ಸಾವಿರ ಕೋಟಿ ಆರೋಪ ಇತ್ತು. ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಮೇಲೂ ಸಾವಿರಾರು ಕೋಟಿ ಆರೋಪ ಇತ್ತು, ಅವರು ದುಡ್ಡು ಕೊಟ್ರು ಬಿಜೆಪಿಯವ್ರು ಸೇರಿಸಿಕೊಂಡರು.ಪಪ್ಪಿ ಬಿಹಾರ ಚುನಾವಣೆಗೆ ದುಡ್ಡು ಕೊಟ್ಟಿಲ್ಲ ಎಂದು ಹೇಳಿದರು.
ಇಡೀ ಮಹಾರಾಷ್ಟ್ರ ಚುನಾವಣೆಗೆ ದುಡ್ಡು ಕೊಟ್ಟಿರೋದು ಅಜಿತ್ ಪವಾರ್. ಇವರ ವಿರುದ್ಧ ಸ್ವತಃ ಕೇಂದ್ರ ಸರ್ಕಾರನೇ ಆರೋಪ ಮಾಡಿತ್ತು.ಬಿಜೆಪಿ ಸೇರಿದ್ ತಕ್ಷಣ ಅವ್ರನ್ನ ವಾಷಿಂಗ್ ಮಿಷನ್ ನಲ್ಲಿ ತೊಳೆದು ಪ್ರಾಮಾಣಿಕರನ್ನಾಗಿ ಮಾಡಿದ್ದಾರೆ. ಇದೇ ತರಹ ಸುಮಾರು 25 ರಾಜಕಾರಣಿಗಳನ್ನು ಬಿಜೆಪಿಯವರು ವಾಷಿಂಗ್ ಮಿಷನ್ ನಲ್ಲಿ ತೊಳೆದು ಪ್ರಾಮಾಣಿಕರನ್ನಾಗಿ ಮಾಡಿದ್ದಾರೆ” ಎಂದು ಬಿಜೆಪಿ ವಿರುದ್ಧ ಗಂಭೀರ ಆರೋಪವನ್ನ ಮಾಡಿದ್ದಾರೆ.