ಬೆಂಗಳೂರು : ಬಾರ್ನಲ್ಲಿ ಕುಡಿಯೋಕೆ ಹೋದವನು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ RR ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೇಘರಾಜ್ (31) ಮೃತ ದುರ್ದೈವಿ.
ನಿನ್ನೆ ತಡರಾತ್ರಿ 1522 ಬಾರಲ್ಲಿ ಸ್ನೇಹಿತರೊಂದಿಗೆ ಕುಡಿಯುತ್ತಿದ್ದ ಮೇಘರಾಜ್ ಬಾತ್ ರೂಮ್ಗೆ ಹೋಗಿದ್ದ. ಸುಮಾರು ಹೊತ್ತಾದ್ರೂ ಆತ ಬಾತ್ ರೂಮ್ನಿಂದ ಹೊರಬಂದಿರಲಿಲ್ಲ. ಈ ವೇಳೆ ಸ್ನೇಹಿತರು ಬಾತ್ ರೂಂನತ್ತ ಹೋಗಿ ಬಾಗಿಲನ್ನ ದೂಡಿದಾಗ ಮೇಘರಾಜ್ ಹೆಣವಾಗಿದ್ದ.
ಘಟನಾ ಸ್ಥಳಕ್ಕೆ RR ನಗರ ಪೊಲೀಸರು, ಸೋಕೋ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಸಿಕೊಂಡಿರುವ RR ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.