ಬೆಂಗಳೂರು : ಬೆಂಗಳೂರಿನ ಚಾಮರಾಜಪೇಟೆಯ ಪೋಸ್ಟ್ ಆಫೀಸ್‌ನಲ್ಲಿ ಸಿಸಿಬಿ ಮತ್ತು ಕೊತ್ತನೂರು ಪೊಲೀಸರು ಶ್ವಾನ ದಳದ ನೆರವಿನಿಂದ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 24 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ವಿದೇಶದಿಂದ ಬಂದಿದ್ದ ಪಾರ್ಸೆಲ್‌ಗಳಲ್ಲಿ ಅಫೀಮು, ಎಂಡಿಎಂಎ ಕ್ರಿಸ್ಟಲ್ ಮತ್ತು ಹೈಡ್ರೋ ಗಾಂಜಾ ಸೇರಿ ಅಪಾರ ಪ್ರಮಾಣದ ಮಾದಕ ವಸ್ತುಗಳು ಅಡಗಿಸಲಾಗಿತ್ತು. ಪಾರ್ಸೆಲ್ ತೆರೆದು ನೋಡಲು ಕಾನೂನಿನಡಿ ಅನುಮತಿ ಇರದ ಕಾರಣ, ಶ್ವಾನ ದಳದ ನೆರವು ಪಡೆಯಲಾಯಿತು. ಶ್ವಾನಗಳಾದ ರಾಮು ಮತ್ತು ಪ್ರಿನ್ಸ್ ಕೇವಲ ನಾಲ್ಕು ನಿಮಿಷಗಳಲ್ಲಿ ಡ್ರಗ್ಸ್ ಪತ್ತೆ ಹಚ್ಚಿದವು. ಶ್ವಾನಗಳ ಚಾಕಚಕತ್ಯೆಯಿಂದ ಪೊಲೀಸರಿಗೆ ಭಾರೀ ಡ್ರಗ್ಸ್ ಮಾಲು ಸಿಕ್ಕಿದೆ.
ಸಾಕು ಪ್ರಾಣಿಗಳ ಆಹಾರದ ಪ್ಯಾಕೆಟ್‌ನಂತೆ ಪ್ಯಾಕ್ ಮಾಡಲಾಗಿದ್ದ ಡ್ರಗ್ಸ್ ಪಾರ್ಸೆಲ್ ಥೈಲ್ಯಾಂಡ್‌ನಿಂದ ಬಂದಿದ್ದು, ಅಂತರರಾಷ್ಟ್ರೀಯ ಮಟ್ಟದ ಮಾದಕ ವಸ್ತು ಕಳ್ಳಸಾಗಣೆ ಜಾಲದ ಸಂಚು ಇರಬಹುದು ಎಂದು ಶಂಕಿಸಲಾಗಿದೆ.