ಬೆಂಗಳುರು:: ಬಿಗ್‌ಬಾಸ್ ಮನೆಯ ಬೀಗ ತೆಗೆದ ಬೆನ್ನಲ್ಲೇ ಇಂದು(ಗುರುವಾರ) ಮುಂಜಾನೆ ಬಿಡದಿಯ ಈಗಲ್ಟನ್ ರೆಸಾರ್ಟ್‌ನಿಂದ ಸ್ಪರ್ಧಿಗಳು ಮತ್ತೆ ದೊಡ್ಮನೆಗೆ ಆಗಮಿಸಿದ್ದಾರೆ.
ಸ್ಪರ್ಧಿಗಳು ಮನೆ ಪ್ರವೇಶ ಮಾಡಿದ ಬೆನ್ನಲ್ಲೇ ವಾಹಿನಿ ಎಂದಿನಂತೆ ಅದೇ ಸಮಯಕ್ಕೆ ಶೋ ಪ್ರಸಾರವಾಗಲಿದೆ ಎಂದು ಪ್ರೋಮೋ ಕೂಡ ಬಿಟ್ಟಿದೆ.
ಜಾಲಿವುಡ್ ಸ್ಟುಡಿಯೋ ರೀ-ಓಪನ್ ಆಗಿ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಬಂದರೂ ಕೂಡ ಇನ್ನೂ ಆಟ ಶುರು ಆಗಿಲ್ಲ. ಆಟ ಪ್ರಾರಂಭಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಕ್ಕೆ ಕಾಯುತ್ತಿರಬಹುದು. ಇಂದು ಮಧ್ಯಾಹ್ನ 1 ಗಂಟೆಯ ನಂತರ ಶೂಟಿಂಗ್ ಶುರು ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಇನ್ನೂ ಇದೇ ವೇಳೆ ಪರಿಸರವಾದಿ ಹೋರಾಟಗಾರರು ರಾತ್ರೋ ರಾತ್ರಿ ಜಾಲಿವುಡ್ ಸ್ಟುಡಿಯೋಸ್ ಗೇಟ್ ಓಪನ್ ಮಾಡಿದ್ದಕ್ಕೆ, ಸರ್ಕಾರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಅನಧಿಕೃತ ಆದೇಶದ ವಿರುದ್ಧ ಘೋಷಣೆ ಕೂಗಿ, ಪರಿಸರ ವಿರೋಧಿ ಜಾಲಿವುಡ್ ಮುಚ್ಚುವಂತೆ ಒತ್ತಾಯಿಸಿದರು. ಜಾಲಿವುಡ್ ಮುಚ್ಚಿಸದಿದ್ದರೆ ಕ್ರಾಂತಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜಾಲಿವುಡ್ ಸ್ಟುಡಿಯೋಸ್ ಗೆ ಬೀಗ ಮುದ್ರೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಲ್ಸ್ ಸ್ಟುಡಿಯೋಸ್ ಆಂಡ್ ಎಂಟರ್ ಟೈನ್ ಮೆಂಟ್ ಲಿಮಿಟೆಡ್ ನಿನ್ನೆ ಬುಧವಾರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಡೆ ವಿರುದ್ಧ ಕೋರ್ಟ್ ಅರ್ಜಿ ಸಲ್ಲಿಕೆ ಮಾಡಲಾಗಿತ್ತು ಈ ಹಿನ್ನಲೆ ಇಂದು ಬೆಳಗ್ಗೆ 11.30 ರ ಸುಮಾರಿಗೆ ಕೋರ್ಟ್ ನ ಸಿಜೆ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯು ಸಾಧ್ಯತೆ ಇದೆ.