ಬೆಂಗಳೂರು : ಸ್ಯಾಂಡಲ್‌ವುಡ್ ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣ ದೇಶದಲ್ಲಿ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿದ್ದು, ಘಟನೆ ನಡೆದು ವರ್ಷಗಳೇ ಕಳೆದರೂ ಇದರ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ.
ಈಗ ಈ ಪ್ರಕರಣವು ದೇಶದ ಎರಡನೇ ಪ್ರಮುಖ ಕೇಸ್ ಎಂದೆನಿಸಿಕೊಂಡಿದೆ. ಒಂದು ವರ್ಷದಲ್ಲಿ ಮೇಜರ್ ಕೇಸ್ ಅನಿಸಿಕೊಂಡ ಪ್ರಕರಣಗಳ ಪಟ್ಟಿ ರಿವೀಲ್ ಆಗಿದ್ದು, ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಕೇಸ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಸಂಜಯ್ ರಾಯ್ ಎಂಬಾತನಿಂದ ಕೃತ್ಯ ನಡೆದಿತ್ತು. ಈಗಾಗಲೇ ಆತನಿಗೆ ಜೀವಾವಧಿ ಶಿಕ್ಷೆ ಕೂಡ ವಿಧಿಸಲಾಗಿದೆ.

ಹಾಗಯೇ ದೇಶದ ಪ್ರಮುಖ ಕೇಸ್ಗಳಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ 2ನೇ ಸ್ಥಾನ ಸಿಕ್ಕಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರ ಸೆಷನ್ ಕೋರ್ಟ್, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ನಲ್ಲಿ ಸುದ್ದಿ ಆಗಿತ್ತು. ದರ್ಶನ್ಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈ ಕಾರಣದಿಂದಲೇ ದರ್ಶನ್ ಪ್ರಕರಣಕ್ಕೆ ತೂಕ ಬಂದಿದೆ. ಉಳಿದಂತೆ ಪುಣೆ ಪೋರ್ಷೆ ಕೇಸ್, ಹೈದರಾಬಾದ್ ಟೆಕ್ ಸ್ಕ್ಯಾಮ್, ಗಾಯಕ ಝುಬೇನ್ ಗರ್ಗ್ ಸಾವು ಪ್ರಮುಖ ಪ್ರಕರಣಗಳಾಗಿವೆ.



















