ನವದೆಹಲಿ : ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಾಪ್ಟರ್ 1 ಸಿನಿಮಾ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. 33 ದೇಶಗಳಲ್ಲಿ ಸಿನಿಮಾ ರಿಲೀಸ್ ಆಗಿರುವ ಈ ಸಿನಿಮಾ ರಾಷ್ಟ್ರಪತಿ ಭವನದಲ್ಲಿಯೂ ಪ್ರದರ್ಶನವಾಗಲಿದೆ.
ಹೌದು.. ರಾಷ್ಟ್ರಪತಿ ಭವನದಲ್ಲಿ ಇಂದು (ಭಾನುವಾರ) ದ್ರೌಪದಿ ಮುರ್ಮು ಅವರು ಸಿನಿಮಾ ವೀಕ್ಷಿಸಲಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ , ನಟಿ ರುಕ್ಮಿಣಿ ವಸಂತ್, ನಿರ್ಮಾಪಕ ಚಲುವೆ ಗೌಡ ಸಮ್ಮುಖದಲ್ಲಿ ಸಿನಿಮಾ ಪ್ರದರ್ಶನ ಮಾಡಲಾಗುತ್ತದೆ. ಬಳಿಕ ಚಿತ್ರತಂಡವನ್ನು ರಾಷ್ಟ್ರಪತಿಗಳು ಗೌರವಿಸಲಿದ್ದಾರೆ.
ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾದಾಗಿನಿಂದ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆಯುತ್ತಿದೆ. ರಿಲೀಸ್ ಆದ 3 ದಿನದಲ್ಲೇ 160ಕ್ಕೂ ಹೆಚ್ಚು ಕೋಟಿ ಗಳಿಕೆ ಮಾಡಿದೆ. ಈ ಸಿನಿಮಾವನ್ನು ಹೊಂಬಾಳೆ ಫಿಲಂಸ್ ಅಡಿ ವಿಜಯ್ ಕಿರಗಂದೂರು ಮತ್ತು ಚಲುವೆ ಗೌಡ ನಿರ್ಮಾಣ ಮಾಡಿದ್ದಾರೆ.