ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಅ. 4ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಬೇಕೆಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ ರಾವ್ ತಿಳಿಸಿದರು.
ಈಗಾಗಲೇ ನೀಡಿರುವ ನಿರ್ದೇಶನದಂತೆ ಬೇರೆ ಬೇರೆ ಇಲಾಖೆ ಸಿಬ್ಬಂದಿಗಳನ್ನು ಸಮೀಕ್ಷೆಗೆ ನೇಮಕ ಮಾಡಲಾಗಿದೆ. ಅ. 3ರಿಂದ ಸಮೀಕ್ಷಕರಿಗೆ ಮತ್ತೊಂದು ತರಬೇತಿ ನೀಡಲಾಗಿದ್ದು, ಸಮೀಕ್ಷೆಯಲ್ಲಿ ಸುಮಾರು 17 ಸಾವಿರ ಸಿಬ್ಬಂದಿ ನೇಮಕಾತಿ ಮಾಡಲಾಗಿದೆ.
ಪ್ರತಿ ವಾರ್ಡ್ ಗೆ ತಲಾ 70 ರಿಂದ 80 ಸಿಬ್ಬಂದಿ ಬೇಕಾಗಿದ್ದು, ಒಬ್ಬೊಬ್ಬ ಸಮೀಕ್ಷಕ ತಲಾ 250 ಮನೆ ಸಮೀಕ್ಷೆ ಮಾಡಬೇಕು ಎಂದಿದ್ದಾರೆ. ಸದ್ಯದಲ್ಲಿ 15 ರಿಂದ 20 ದಿನದೊಳಗೆ ಸಮೀಕ್ಷೆ ಮುಗಿಸಬೇಕೆಂದಿದೆ, ಆದರೆ ಆ ಸಮಯದಲ್ಲಿ ಸಮೀಕ್ಷೆ ಪೂರ್ಣವಾಗದಿದ್ದಲ್ಲಿ ಮುಂದುವರಿಸುವ ಅವಕಾಶ ಇದೆ ಹಾಗೆಯೆ ಸಮೀಕ್ಷೆಗೆ ಬೇಕಾದ ಸಾಮಗ್ರಿಗಳನ್ನು ಈಗಾಗಲೇ ಒದಗಿಸಲಾಗಿದೆ.
ಪ್ರತಿ ಸಿಬ್ಬಂದಿ ತಮಗೆ ನೀಡಿರುವ ಮನೆಗಳಿಗೆ ಬೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು. ಸಂಗ್ರಹಿಸಿದ ಮಾಹಿತಿಯನ್ನು ತಮ್ಮಗೆ ನೀಡಿರುವ ಅ್ಯಫ್ ನಲ್ಲಿ ಅಪ್ ಲೋಡ್ ಮಾಡಬೇಕು ಎಂದು ಆಜ್ಙಾಪಿಸಿದ್ದಾರೆ.