ಕುಂದಾಪುರ : ಡಿವೈನ್ ಸ್ಟಾರ್ ಖ್ಯಾತಿಯ ರಿಷಭ್ ಶೆಟ್ಟಿ ಇವರ ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಬಿಡುಗಡೆಯಾಗಿ ವಿಶ್ವದೆಲ್ಲಡೆ ಸದ್ದು ಮಾಡುತ್ತಿದೆ.
300 ರಿಂದ 1300ವರೆಗೆ ಟಿಕೆಟ್ ಪ್ರೈಸ್ ಇದ್ದರೂ ಕೂಡ ಎಲ್ಲೆಡೆ ಶೋಗಳು ಹೌಸ್ ಫುಲ್ ಆಗಿ ಟಿಕೆಟ್ ಗಳು ಸಿಗದಂತಹ ಪರಿಸ್ಥಿತಿ ಉಂಟಾಗಿದೆ.
ಸದ್ಯ, ರಿಷಭ್ ಹುಟ್ಟೂರಾಗಿರುವ ಕುಂದಾಪುರದಲ್ಲೂ ಇದೇ ಹವಾ ಇದೆ. ಚಿತ್ರ ಬಿಡುಗಡೆಯಾದಾಗಿನಿಂದ ಈ ವೀಕೆಂಡ್ ವರೆಗಿನ ಬಹುತೇಕ ಎಲ್ಲಾ ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿಬಿಟ್ಟಿದೆ.
ದಿನಕ್ಕೆ ಸರಿಸುಮಾರು 15 ರಿಂದ 20 ಶೋಗಳನ್ನು ಕುಂದಾಪುರದಲ್ಲಿ ಪ್ರದರ್ಶಿಸಲಾಗುತ್ತಿದ್ದು, ಟಿಕೆಟ್ ಗಳು ಸಿಗದೆ ಸಿನಿ ರಸಿಕರು ಕಾಯುವಂತಹ ವಾತಾವರಣ ಉಂಟಾಗಿದೆ.
ಕಾಂತಾರ ಚಾಪ್ಟರ್ 2 ಬಂದಾಗಲೂ ಇದೇ ರೀತಿಯಾಗಿ ಹುಟ್ಟೂರಿನ ಜನರು ಬೆಂಬಲಿಸಿದ್ದು, ತಮ್ಮೂರಿನ ಸಂಸ್ಕೃತಿಯನ್ನು ವಿಶ್ವದಗಲಕ್ಕೆ ಪರಿಚಯಿಸಿರುವ ರಿಷಭ್ ಶೆಟ್ಟಿಗೆ ಭಾರಿ ಪ್ರೋತ್ಸಾಹ ಕಂಡು ಬರುತ್ತಿದೆ.