ಬೆಂಗಳೂರು- ಇಡೀ ಸಿನಿಮಾ ಗ್ಲೋಬಲ್ ಮ್ಯಾಪ್ ಕಬ್ಜ ಮಾಡಿಕೊಳ್ಳುವ ತರತುರಿಯಲ್ಲೇ ‘ಕಾಂತಾರ’ದ ದಾರಿ ಮತ್ತಷ್ಟು ಸುಗಮವಾಗಿದೆ. ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ಟಿಕೆಟ್ ಬುಕಿಂಗ್ ಇತಿಹಾಸ ಒಂದಕ್ಕೆ ಹೊಸ ಭಾಷ್ಯ ಬರೆದಿದೆ. ಆಡಂಬರದ ಪ್ರಚಾರವಿಲ್ಲದೆ ತೆರೆಗೆ ಬರುತ್ತಿರುವ ಕಾಂತಾರ ಚಾಪ್ಟರ್-1 ಸೃಷ್ಟಿಸಿರುವ ಒಂದು ಗೋಲ್ಡನ್ ದಾಖಲೆಯ ಕಥೆ ನಿಜಕ್ಕೂ ಅಮೋಘ..!

‘ಆನೆ ನಡೆದಿದ್ದೇ ದಾರಿ’ ಎನ್ನುವಂತೆ ಕಾಂತಾರದ ಗುಂಗು ಗಾಂಧಿನಗರವನ್ನು ದಾಟಿ ವಿಶ್ವದೆಲ್ಲೆಡೆ ಪಸರಿಸುತ್ತಿದೆ. ಅ.2ಕ್ಕೆ ವಿಶ್ವದಾದ್ಯಂತ 7 ಭಾಷೆಗಳಲ್ಲಿ ವರ್ಲ್ಡ್ ರಿಲೀಸ್ ಭಾಗ್ಯ ಕಾಂಉತ್ತಿರವ ಕಾಂತಾರ ಟಿಕೆಟ್ ಗಳು ಯಾವ ಹಂತಕ್ಕೆ ಸೇಲ್ ಆಗಿದೆ ಎಂಬುದನ್ನು ಕಣ್ಣರಳಿಸಿ ನೋಡುವ ಟೈಮ್ ಬಂದಿದೆ. ಬಿಡುಗಡೆ ಮುಂಚಿನ ವ್ಯವಹಾರಗಳಲ್ಲಿ ಸಖತ್ತಾಗೆ ಸೇಫ್ ಆಗಿರುವ ಹೊಂಬಾಳೆ ಫಿಲಂಸ್, ಅಡ್ವಾನ್ಸ್ ಬುಕಿಂಗ್ ನಲ್ಲಿಯೂ ತನ್ನ ಖಾತೆ ಓಪನ್ ಮಾಡಿದೆ. ಬೊಕ್ಕಸ ತುಂಬಿಸಿಕೊಙಳ್ಳುತ್ತಿದೆ.

ನಾಲ್ಕೈದು ದಿನಗಳ ಹಿಂದೆಯಷ್ಟೇ ಕಾಂತಾರ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಯಿತು. ಇದೀಗ ಮಲ್ಟಿಪ್ಲೆಕ್ಸ್ ಟಿಕೆಟ್ ಸೇಲ್ ಲೆಕ್ಕಾಚಾರ ನೋಡಿದರೆ ಒಮ್ಮೆ ತಲೆ ತಿರುಗುವಂತಿದೆ. ಬರೋಬ್ಬರಿ 4 ಲಕ್ಷ ಟಿಕೆಟ್ ಗಳು ಬುಕ್ ಆಗಿರುವುದು, ಕಾಂತಾರ-1 ಸಿನಿಮಾಹಬ್ಬದ ಒಂದು ಬಿಗ್ ಎಕ್ಸ್ಂಪಲ್. ಪಿವಿಆರ್ ಮತ್ತು ಐನಾಕ್ಸ್ ಸೇರಿದಂತೆ ಹಲವೆಡೆ ಮೊದಲ ದಿನದ ಕಂಪ್ಲೀಟ್ ಶೋಗಳು ಬುಕ್ ಆಗಿವೆ. ಗಾಂಧಿಜಯಂತಿಯ ದಿನ ಸರ್ಕಾರಿ ರಜೆ ಇರುವುದೇ ಈ ಟಿಕೆಟ್ ಸೇಲ್ ಏರಿಕೆಗೆ ಕಾರಣವಾಗುತ್ತಿದೆ.

ಸದ್ಯಕ್ಕೆ ರಾಜ್ಯಸರ್ಕಾರ ಜಾರಿಗೆ ತಂದ ಗರಿಷ್ಠ ಬೆಲೆ 200 ಟಿಕೆಟ್ ದರಕ್ಕೆ ಹೈಕೋರ್ಟ್ ತಡೆಯಾಜ್ಞೆ ಒಡ್ಡಿದೆ. ಇದು ಕೂಡ ‘ಕಾಂತಾರ’ ಒಟ್ಟು ಬಾಕ್ಸ್ ಆಫೀಸ್ ಗಳಿಕೆಯ ಗತಿಯನ್ನು ಬದಲಾಯಿಸಲಿದೆ. ಪ್ರಮೋಶನ್ ಗಳಲ್ಲಿ ಬ್ಯುಸಿಯಾಗಿರುವ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮಾತ್ರ ನಮಗೆ ಕೋಟಿ ಕೋಟಿ ಕ್ಲಬ್ ಬೇಡ. ಅಭಿಮಾನಿಗಳ ಕ್ಲಬ್ ಬೇಕು ಎಂದು ಒಂದು ದೊಡ್ಡ ಗೆಲುವಿನ ವಿಶ್ವಾಸದಲ್ಲಿದ್ದಾರೆ. ‘ಕಾಂತಾರ-1’ ತೆರೆಗೆ ಅಪ್ಪಳಿಸಿದ ಮೇಲಾಗುವ ದಾಖಲೆಗಳ ಜಾತ್ರೆ ದಂತಕಥೆಯಾಗುತ್ತಾ..? ವೀ ಹ್ಯಾವ್ ಟು ವೇಟ್..!