ಬೆಂಗಳೂರು: ವೈದ್ಯರ ನಿರ್ಲಕ್ಷ್ಯದಿಂದ ನಾಲ್ಕೂವರೆ ತಿಂಗಳ ಮಗು ಸಾವನ್ನಪ್ಪಿದ ಘಟನೆ ನಗರದ ದಾಸರಹಳ್ಳಿ ಬಳಿಯ ಸಪ್ತಗಿರಿ ಆಸ್ಪತ್ರೆಯಲ್ಲಿ ನಡೆದಿದೆ.
ಶೇಖರ್ ಎಂಬ ನಾಲ್ಕೂವರೆ ತಿಂಗಳ ಮಗು ಸಾವನ್ನಪ್ಪಿದ ಮಗು.
ಮಗು ಶೇಖರ್ ಗೆ ಕೆಮ್ಮು, ಜ್ವರ ಎಂದು ಸಪ್ತಗಿರಿ ಆಸ್ಪತ್ರೆಗೆ ಪೋಷಕರು ಸೇರಿಸಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಮಗು ಇಂದು (ಶನಿವಾರ) ಬೆಳಗಿನ ಜಾವ 12 ಗಂಟೆಗೆ ಸಾವನ್ನಪ್ಪಿದೆ.
ವೈದ್ಯರ ನಿರ್ಲಕ್ಷ್ಯದಿಂದಲೆ ಮಗು ಸಾವನ್ನಪ್ಪಿದೆ ಎಂದು ಸಪ್ತಗಿರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ಮೇಲೆ ಪೋಷಕರು ಆರೋಪಿಸಿ ಸೋಲದೇವನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.