ಬೆಂಗಳೂರು: ಜೆಡಿಎಸ್ ಮುಖಂಡ ಹನುಮಂತೇಗೌಡ ಕಬ್ಜ ಮಾಡಿದ್ದ 75 ಕೋಟಿ ಮೌಲ್ಯದ ಭೂಮಿಯನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ. ಕೆಂಗೇರಿ ಬಳಿಯ ವಳಗೆರೆಹಳ್ಳಿ ಸರ್ವೆ ನಂಬರ್‌ನಲ್ಲಿ ಸುಮಾರು 75 ಕೋಟಿ ಬೆಲೆ ಬಾಳುವ 1.5 ಎಕರೆ ಭೂಮಿಯನ್ನು ಕಬ್ಜ ಮಾಡಲಾಗಿತ್ತು.
ಹನುಮಂತೇಗೌಡ ಈ ಹಿಂದೆ ಯಲಹಂಕ ಎಂಎಲ್‌ಎ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಅವರ ಪತ್ನಿ ಲತಾ ಹೆಸರಲ್ಲಿ ಈ ಜಮೀನಿತ್ತು. ಬಿಡಿಎ ಸ್ವತ್ತನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು. ಈ ಸಂಬಂಧ ಬಿಡಿಎ ಎಸ್ಪಿ ಲಕ್ಷ್ಮೀಗಣೇಶ್ ನೇತೃತ್ವದಲ್ಲಿ ಒತ್ತುವರಿ ತೆರವು ಮಾಡಲಾಗಿದೆ.