ಬೆಳಗಾವಿ: ರಾಜ್ಯ ಸರ್ಕಾರ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಮಯದಲ್ಲಿ ಲಿಂಗಾಯತ ಪಂಚಮಸಾಲಿ ಎಂದೇ ಬರೆಸಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು
ಬೆಳಗಾವಿಯಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ಪಂಚಮಸಾಲಿ ವಕೀಲರ ಪರಿಷತ್ ಸಾಕಷ್ಟು ಚರ್ಚೆ ಮತ್ತು ಸಭೆಗಳನ್ನು ಮಾಡಿ ನಿರ್ಣಯ ಕೈಗೊಂಡಿದೆ. ಯಾವುದೇ ಕಾರಣಕ್ಕೂ ಮಹಾಸಭೆಯ, ಮಠಾಧೀಶರ ಹಾಗೂ ಸಂಘ ಸಂಸ್ಥೆಗಳ ಮಾತುಗಳನ್ನು ಕೇಳಬೇಡಿ. ಪಂಚಮಸಾಲಿ ಗುರುಗಳು, ಪಂಚಮಸಾಲಿ ಸಂಘದ ಅಧ್ಯಕ್ಷರು ನೀಡುವ ಸಂದೇಶ ಪಾಲಿಸಬೇಕು ಎಂದು ಸ್ವಾಮೀಜಿ ಹೇಳಿದರು.
ಇದಲ್ಲದೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಏಕತಾ ಸಮಾವೇಶದಲ್ಲಿ ಸಹ ಸಮಾಜದ ಯಾರೊಬ್ಬರೂ ಭಾಗವಹಿಸಬಾರದು ಎಂದು ಕೂಡಲಸಂಗಮ ಸ್ವಾಮೀಜಿ ಕರೆ ನೀಡಿದರು.



















