ಬೆಂಗಳೂರು: ದಸರಾ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದ್ದು, ನಗರದಲ್ಲಿ ಗೊಂಬೆಗಳ ಕಲರವ ಹೆಚ್ಚಾಗಿದೆ.
ಮಾರುಕಟ್ಟೆಗಳಲ್ಲಿ ನವ ದೇವತೆಗಳ ಗೊಂಬೆ ಲಗ್ಗೆ ಇಟ್ಟಿದ್ದು, ಜಯನಗರದ 4 ಬ್ಲಾಕ್ ನಲ್ಲಿ ಗೊಂಬೆಗಳಲ್ಲಿ ದಸರಾ ದರ್ಬಾರ್ ಶುರುವಾಗಿದೆ.
ಗೊಂಬೆಗಳ ಮೂಲಕ ರಾಮಾಯಣ, ಮಹಾಭಾರತದ ಹಲವು ಸನ್ನಿವೇಶಗಳು ಮೂಡಿ ಬಂದಿದ್ದು, ಗೋವರ್ಧನ ಗಿರಿ, ಕೃಷ್ಣನ ತುಂಟಾಟ, ಅಯೋಧ್ಯೆಯ ರಾಮಮಂದಿರ, ದಸರಾ ಗಜಪೆಡೆ, ಅಂಬಾರಿ ಹೊತ್ತ ಆನೆ, ಶ್ರೀನಿವಾಸ ಕಲ್ಯಾಣ, ಲಕ್ಷ್ಮೀ ನರಸಿಂಹ ಸೇರಿದಂತೆ ಹಲವು ದೃಶ್ಯಗಳು ಅನಾವರಣಗೊಂಡಿವೆ.
ಕಳೆದ ಬಾರಿ ಅಯೋಧ್ಯೆ ರಾಮನ ದೃಶ್ಯಗಳು ಹೆಚ್ಚಾಗಿ ನಗರದಲ್ಲಿ ಕಂಡು ಬಂದಿತ್ತು. ಈ ಬಾರಿ ರಾಮಾಯಣದ ಪ್ರತಿಯೊಂದು ದೃಶ್ಯಗಳು ಮೂಡಿಬಂದಿವೆ.



















