ಬೆಂಗಳೂರು: ಜವಹರಲಾಲ್ ನೆಹರು ತಾರಲಯದಲ್ಲಿ ವಿಜ್ಞಾನ ಪ್ರದರ್ಶನಕ್ಕೆ ಇಂದು ಚಾಲನೆ ನೀಡಲಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ಸೈನ್ ಇನ್ ಆ್ಯಕ್ಷನ್ ಎಂಬ ಹೆಸರಿನಲ್ಲಿ ವಿಜ್ಞಾನ ಪ್ರದರ್ಶನ ನಡೆಯಲಿದೆ. ಪ್ರದರ್ಶನಕ್ಕೆ ಇಸ್ರೋ ವಿಜ್ಞಾನಿ ಶ್ರೀನಾಥ್ ರತ್ನಕುಮಾರ್ ಚಾಲನೆ ನೀಡಿದರು.
ವಿವಿಧ ಶಾಲೆಯ ಮಕ್ಕಳಿಂದ ವಿಜ್ಞಾನ ಪ್ರಯೋಗಗಳು ಪ್ರದರ್ಶನವೂ ನಡೆಯಿತು. ಕಾರ್ಯಕ್ರಮದಲ್ಲಿ 80ಕ್ಕೂ ಹೆಚ್ಚು ಮಕ್ಕಳು ಭಾಗಿಯಾಗಿದ್ದರು.



















