ಬೆಂಗಳೂರು : ಭಾರತದಲ್ಲಿ ಪ್ರಜಾಪ್ರಭುತ್ವ ಹೊಸದಲ್ಲ, ಅದು ನಮ್ಮ ನಾಗರಿಕತೆಯ ಭಾಗ. ಬುದ್ಧನ ಕಾಲದ ಸಭೆಗಳು ಮತ್ತು ಹಳ್ಳಿಗಳಲ್ಲಿನ ಚರ್ಚೆಗಳು ಪ್ತಜಾಪ್ರಭುತ್ವಕ್ಕೆ ಬುನಾದಿ. 12ನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪ, ನಿಜವಾದ ‘ಜನರ ಸಂಸತ್ತುಇಲ್ಲಿ ಎಲ್ಲರೂ ಸಮಾನವಾಗಿ ಚರ್ಚಿಸುತ್ತಿದ್ದರು. ಸರ್ವಾಧಿಕಾರಿಗಳು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ಕಾರ್ಯಕ್ರಮವನ್ನು ಉದ್ದೇಶಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಜಾತಿ, ಧರ್ಮ, ಭಾಷೆಯನ್ನು ರಾಜಕೀಯ ಲಾಭಕ್ಕಾಗಿ ಬಳಸುವುದು ಪ್ರಜಾಪ್ರಭುತ್ವಕ್ಕೆ ಅಪಾಯ. ಪ್ರಬಲರು ಮಾತ್ರ ಬದುಕಲು ಅರ್ಹರು ಎಂಬ ನಂಬಿಕೆ ಅಪಾಯಕಾರಿ. ನಿಜವಾದ ಗಣರಾಜ್ಯ ದುರ್ಬಲರನ್ನು ಮೇಲೆತ್ತಬೇಕು. ಸಂವಾದದ ಬದಲಿಗೆ ವೈರತ್ವ, ಸಹಿಷ್ಣುತೆ ಇಲ್ಲದಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಸುಳ್ಳು ಮಾಹಿತಿಗಳು ಸತ್ಯದ ಮೇಲೆ ಪ್ರಾಬಲ್ಯ ಸಾಧಿಸುವುದು ಗಂಭೀರ ಅಪಾಯ. ಸಂಸತ್ತಿನಲ್ಲಿ ಚರ್ಚೆಗಳು ಕೇವಲ ಔಪಚಾರಿಕವಾಗಬಾರಬಾರದು ಪರಿಣಾಮಕಾರಿಯಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಜನಪ್ರತಿನಿಧಿಗಳು ಚುನಾವಣೆ ಸಮಯದಲ್ಲಿ ಮಾತ್ರವಲ್ಲ, ಪ್ರತಿದಿನವೂ ಜನರಿಗೆ ಉತ್ತರದಾಯುತ್ವ.ಪ್ರಜಾಪ್ರಭುತ್ವ ಎಂದಿಗೂ ಪೂರ್ಣಗೊಳ್ಳುವುದಿಲ್ಲ, ಅದು ಸದಾ ವಿಕಸಿಸುತ್ತಲೇ ಇರುತ್ತದೆ. ಸಮ್ಮೇಳನ ಪ್ರಜಾಪ್ರಭುತ್ವದ ಆಂತರಿಕ ಶತ್ರುಗಳ ವಿರುದ್ಧ ಹೋರಾಡಲು ಬಲ ತುಂಬಲಿ ಎಂದಿದ್ದಾರೆ.