ಬೆಂಗಳೂರು : ಪತ್ನಿಯನ್ನು ಕೊಂದು ಪರಾರಿಯಾಗಿದ್ದ ಆರೋಪಿ ಪತಿಯನ್ನು ಯಲಹಂಕ ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ.
ಸೈದುಲ್ ಬಂಧಿತ ಆರೋಪಿ. ಅಮೀನಾ ಮೃತ ಪತ್ನಿ.
ಅಮೀನಾ ಬೇರೊಬ್ಬನ ಜೊತೆ ಅಕ್ರಮ ಸಂಬಂದ ಹೊಂದಿದ್ದಾರೆಂದು ಶಂಕಿಸಿ ಕಳೆದ ಸೆ.3 ರಂದು ಆರೋಪಿ ಸೈದುಲ್ ಹತ್ಯೆ ಮಾಡಿ, ಪರಾರಿಯಾಗಿದ್ದ, ಈ ಘಟನೆಗೆ ಸಂಬಂದಪಟ್ಟಂತೆ ಯಲಹಂಕ ಉಪ ನಗರದಲ್ಲಿ ಪ್ರಕರಣ ದಾಖಲಾಗಿತ್ತು.
2019ರಲ್ಲಿ ಅಮೀಳಾಳನ್ನ ಪ್ರೀತಿಸಿ ಎರಡನೇ ಮದುವೆಯಾಗಿದ್ದ ಆರೋಪಿ ಮೊದಲನೇ ಮದುವೆ ಬಗ್ಗೆ ಮುಚ್ಚಿಟ್ಟಿದ್ದ, ಇತ್ತೀಚೆಗೆ ಅಮೀನಾ ಮೊದಲನೇ ಮದುವೆ ಬಗ್ಗೆ ತಿಳಿದುಕೊಂಡಿದ್ದಳು. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಆಗಾಗ ಜಗಳ ಆಗುತಿತ್ತು,
ಅದೇ ರೀತಿ ಸೆ. 2ರಂದು ಜಗಳ ಮಾಡಿಕೊಂಡಿದ್ದರು. ಅಮೀನಾ ಕುಟುಂಬಸ್ಥರು ಬುದ್ದಿವಾದ ಹೇಳಿ ಸರಿಪಡಿಸಿದ್ದರು. ಆದರೆ ಮರುದಿನ ಮತ್ತೆ ಜಗಳ ತೆಗೆದು ಪತ್ನಿ ಮೇಲೆ ಮರದ ರಿಪೀಸ್ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ತೀವ್ರ ಗಾಯಗೊಂಡ ಅಮೀನಾ ಸಾವನ್ನಪ್ಪಿದ್ದಾಳೆ. ಪತ್ನಿಯನ್ನು ಕೊಲೆ ಮಾಡಿ ರಾಜಮಂಡ್ರಿಗೆ ಪರಾರಿಯಾಗಿದ್ದ ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದ ಯಲಹಂಕ ನ್ಯೂಟೌನ್ ಪೊಲೀಸರು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.



















