ಧಾರವಾಡ : ಸರಕಾರದಿಂದ ಬಂದಿರುವ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎನ್ನುವ ಆರೋಪದ ಮೇಲೆ ಮೇಯರ್ ಜ್ಯೋತಿ ಪಾಟೀಲ್ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ, ಕಚೇರಿಗೆ ಬೀಗ ಹಾಕುವ ಮೂಲಕ ಪ್ರತಿಭಟನೆ ಮಾಡಿದ್ದಾರೆ.
ವಿನಯ ಕುಲಕರ್ಣಿ ಕ್ಷೇತ್ರದ ವ್ಯಾಪ್ತಿಗೆ ಬರುವ ಮಹಾನಗರ ಪಾಲಿಕೆಯ 9 ವಾರ್ಡುಗಳಿಗೆ ರಾಜ್ಯ ಸರಕಾರದಿಂದ ಬಿಡುಗಡೆಯಾಗಿರುವ10 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲು ವಿಳಂಬವಾಗಿದೆ. ಇದರಿಂದ ಆಕ್ರೋಶಗೊಂಡಿರುವ ಕೈ ಕಾರ್ಯಕರ್ತರು ಕೂಡಲೇ ಅನುದಾನ ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದಾರೆ.
ಪೊಲೀಸರು ಕಚೇರಿಯ ಬೀಗ ತೆಗೆಸಿದ ಬಳಿಕ ಮೇಯರ್ ಕಚೇರಿಯೊಳಗೆ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ತಡೆಯಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ. ಇದೇ ವೇಳೆ ತಮಗೆ ಅಶ್ಲೀಲ ಪದ ಬಳಸಿದ ಬಿಜೆಪಿ ಸದಸ್ಯ ಶಂಕರ ಶೆಳಕೆ ವಿರುದ್ಧ ಕಾರ್ಯಕರ್ತರು ಆರೋಪಿಸಿ, ತಮಗೆ ಅವಾಚ್ಯ ಶಬ್ದ ಬಳಸಿದ್ದೇಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಓರ್ವ ಕೈ ಸದಸ್ಯನಿಗೆ ರೌಡಿ ಶೀಟರ್ ಪದ ಬಳಸಿದ್ದಾರೆ ಎಂದು ಶಂಕರ ಮೇಲೆ ಕಾರ್ಯಕರ್ತರು ಆರೋಪಿಸಿ ಮೇಯರ್ ಕಚೇರಿ ಮುಂದೆ ಗಲಾಟೆ ಮಾಡಿದ್ದಾರೆ.



















