ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಎಲ್ಲಾ ಜನರ ಮಾನ ಪ್ರಾಣ ಕಾಪಾಡಬೇಕಿದ್ದ ಸರ್ಕಾರ ಏಕ ಪ್ರಕಾರವಾಗಿ ನಡೆಯುತ್ತಿದೆ ಎಂದು ಕೇಂದ್ರ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ವರದಿಗಾರರರಿಗೆ ಸ್ಪಂದಿಸಿ ಮಾತನಾಡಿದ ಶೋಭಾ, ಕಳೆದ ವರ್ಷ ಗಣೇಶ ಉತ್ಸವದಲ್ಲಿ ಹಲವು ಗಲಭೆ ನಡೆದಿದ್ದವು. ಹಾಗಾಗಿ, ಮುಕ್ತವಾಗಿ ಹಬ್ಬ ಆಚರಿಸಲು ಅವಕಾಶ ಕೇಳಿದ್ದೇವು. ಆದರೆ ಸರ್ಕಾರ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿತ್ತು ಎಂದು ತಿಳಿಸಿದ್ದಾರೆ.
ಇಂತಹ ಗಲಭೆಗಳು, ಇಂತಹ ಅಹಿತಕರ ಘಟನೆಗಳು ನಡೆಯಬಾರದು, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ನಾವು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನಾವು ಈಗಾಗಲೇ ಮನವಿ ಮಾಡಿಕೊಂಡಿದ್ದೇವು. ಆದರೆ ಮತ್ತೆ ಮಂಡ್ಯದ ಮದ್ದೂರಿನಲ್ಲಿ ಕಲ್ಲು ತೂರಾಟ ಆಗಿದೆ. ಗಣೇಶ ಮೆರವಣಿಗೆ ಎಲ್ಲಿ ಹೋಗಬೇಕು ಎಂದು ಪೊಲೀಸರು ನಿರ್ಧಾರ ಮಾಡುತ್ತಾರೆ. ಆದಾಗ್ಯೂ ಗಲಬೆ ಹೇಗೆ ಆಯಿತು, ಅಷ್ಟು ದೊಡ್ಡ ಪ್ರಮಾಣದ ಕಲ್ಲು ಸಂಗ್ರಹಕ್ಕೆ ಅವಕಾಶ ಹೇಗೆ ಸಿಕ್ಕಿತು, ಕಲ್ಲು ತೂರಾಟ ಮಾಡಿದವರನ್ನು ಕೂಡಲೇ ಬಂಧಿಸಬೇಕಿತ್ತು. ಮುಂಚೆಯೇ ಮಸೀದಿ ಮುಂದೆ ಪೊಲೀಸರನ್ನು ನಿಯೋಜನೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.
ಪರಮೇಶ್ವರ್ ಅವರು ಅಮಸರ್ಥ ಗೃಹ ಸಚಿವ. ಅಲ್ಪ ಸಂಖ್ಯಾತರಿಗೆ ಇಷ್ಟು ಧೈರ್ಯ ಬರಲು ಕಾರಣ ಏನು? ಅವರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಲಾಗುತ್ತಿದೆ. ಈ ಧೈರ್ಯದಿಂದಲೇ ಈ ರೀತಿಯ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


















