ಬೆಂಗಳೂರು : ನಾಮನಿರ್ದೇಶಿತ ಸ್ಥಾನಗಳಿಗೆ 7 ತಿಂಗಳ ಹಗ್ಗ ಜಗ್ಗಾಟದ ನಂತರ ಅಂತಿಮವಾಗಿ ನೇಮಕ ಆದೇಶ ಹೊರಬಿದ್ದಿದ್ದು, ಡಾ.ಆರತಿ ಕೃಷ್ಣ, ಎಫ್.ಎಚ್.ಜಕ್ಕಪ್ಪನವರ್, ಕೆ. ಶಿವಕುಮಾರ್, ರಮೇಶ್ ಬಾಬು ಪರಿಷತ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಈ ಪೈಕಿ ರಮೇಶ್ ಬಾಬು ಅವರು ಸಿ.ಪಿ. ಯೋಗೇಶ್ವರ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಾಮನಿರ್ದೇಶನಗೊಂಡಿ ದ್ದಾರೆ. ಅವರ ಅವಧಿ 11 ತಿಂಗಳು ಮಾತ್ರ ಇರಲಿದೆ. ಪಕ್ಷ ಮರು ನಾಮನಿರ್ದೇಶನ ಮಾಡಿದರೆ ಮಾತ್ರ ನಂತರವೂ ಅವರು ಆ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ರಾಜ್ಯ ಕಾಂಗ್ರೆಸ್‌ನಿಂದ ಶಿಫಾರಸಾದ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಡಿ.ಜಿ.ಸಾಗರ್ ಹಾಗೂ ದಿನೇಶ್ ಅಮಿನ್ ಮಟ್ಟು ಹೆಸರು ಕೈಬಿಟ್ಟಿತ್ತು.