ಬೆಂಗಳೂರು : ಈ ಬಾರಿಯ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಗೆ ಆಹ್ವಾನವನ್ನು ಆರಂಭದಿಂದಲೂ ವಿರೋಧಿಸಿಕೊಂಡು ಬಂದಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಇದೀಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಈ ಕುರಿತು ವಿಜಯಪುರದ ಆಲಮಟ್ಟಿಯಲ್ಲಿ ಮಾತಾಡಿದ ಸಿಎಂ ಸಿದ್ದರಾಮಯ್ಯ, ಪ್ರತಾಪ್ ಸಿಂಹ ಕೋರ್ಟ್ ಮೆಟ್ಟಿಲೇರಿದ್ದು ಬಹಳ ಸಂತೋಷ, ಅದನ್ನು ಕೋರ್ಟ್ ತೀರ್ಮಾನ ಮಾಡುತ್ತದೆ ಎಂದಿದ್ದಾರೆ. ಈ ಹಿಂದೆ ನಿಸಾರ್ ಅಹ್ಮದ್ ದಸರಾ ಉದ್ಘಾಟನೆ ಮಾಡಿದಾಗ ಅವರು ಯಾಕೆ ಕೋರ್ಟ್ ಗೆ ಹೋಗಲಿಲ್ಲ. ಟಿಪ್ಪು ಸುಲ್ತಾನ್ ದಸರಾ ಮಾಡಿದಾಗ ಇವರೆಲ್ಲಾ ಯಾಕೆ ಏನೂ ಮಾಡಲಿಲ್ಲ ಎಂದು ಸಿಎಂ ಪ್ರಶ್ನಿಸಿದ್ದಾರೆ.
ಪ್ರತಾಪ್ ಸಿಂಹ ಕೋರ್ಟ್ ಗೆ ಹೋಗಲಿ, ನಾವು ಕೂಡ ಕಾನೂನು ಹೋರಾಟ ಮಾಡುತ್ತೇವೆ. ಅವರು ಇದರಲ್ಲಿ ರಾಜಕೀಯ ಹೋರಾಟ ಮಾಡಿದರೆ ಎಲ್ಲದಕ್ಕೂ ನಾವು ಉತ್ತರ ನೀಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.