ಬೆಂಗಳೂರು : ಈ ಹಿಂದೆ ಗೋಬಿ, ಕಬಾಬ್ ಗಳಲ್ಲಿ ಬಳಕೆ ಮಾಡುತ್ತಿದ್ದ ಕೃತಕ ಬಣ್ಣವನ್ನು ನಿಷೇಧಿಸಿದ್ದ ಆರೋಗ್ಯ ಇಲಾಖೆ, ಇದೀಗ ಸಿಹಿ, ಖಾರಾ ತಿಂಡಿಗಳಿಗೂ ಬಳಕೆ ಮಾಡಲಾಗುತ್ತಿದೆ ಎಂದು ಆಹಾರ ಸುರಕ್ಷತಾ ಇಲಾಖೆ ನಡೆಸಿದ ವಿಶ್ಲೇಷಣೆಯಲ್ಲಿ ದೃಢವಾಗಿದೆ.
ಆಹಾರ ಇಲಾಖೆ ನಡೆಸಿದ ಅಭಿಯಾನ ನಡೆಸಿ ವಿವಿಧ ಆಹಾರ ತಿನಿಸುಗಳ ಸಾವಿರಾರು ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಲಾಗಿತ್ತು. ಸಿಹಿ ತಿನಿಸುಗಳಲ್ಲಿ ಆಹಾರ ಇಲಾಖೆ ನಿಷೇಧಿತ ಕೃತಕ ಬಣ್ಣವನ್ನು ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.
ರಾಜ್ಯಾದ್ಯಂತ ಒಟ್ಟು 3787 ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಆ ಪೈಕಿ 374 ಮಾದರಿಗಳು ಅಸುರಕ್ಷಿತ ಎನ್ನುವುದು ತಿಳಿದು ಬಂದಿದೆ. ಈ ಹಿನ್ನಲೆ ಆರೋಗ್ಯ ಇಲಾಖೆ ವಿಶ್ಲೇಷಣಾ ವರದಿ ಆಧರಿಸಿ 68 ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದೆ.