ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಇಂದಿನಿಂದ ಜಿಎಸ್‌ ಟಿ ಪರಿಷ್ಕರಣೆ | ಎರಡು ದಿನಗಳ ಕಾಲ ಜಿಎಸ್‌ಟಿ ಮಂಡಳಿ ಸಭೆ

September 3, 2025
Share on WhatsappShare on FacebookShare on Twitter

ನವದೆಹಲಿ: 8 ವರ್ಷಗಳ ನಂತರ ದೇಶದ ಜಿಎಸ್‌ಟಿ ವ್ಯವಸ್ಥೆಯಲ್ಲಿನ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಜಿಎಸ್‌ಟಿ ಮಂಡಳಿ ಇಂದಿನಿಂದ ಎರಡು ದಿನಗಳ ಕಾಲ ಸಭೆ ನಡೆಸಲಿದೆ.

ದಿನನಿತ್ಯದ ಅಗತ್ಯ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಸರಕುಗಳನ್ನು ಅಗ್ಗವಾಗಿಸುವ ಮತ್ತು ಆಯ್ದ ಐಷಾರಾಮಿ ವಸ್ತುಗಳ ಮೇಲೆ ಹೆಚ್ಚಿನ ಸುಂಕಗಳನ್ನು ಪರಿಚಯಿಸುವ ಮೂಲಕ ವ್ಯಾಪಕ ತೆರಿಗೆ ಪರಿಷ್ಕರಣೆಯ ವಿಚಾರ ಈಗಾಗಲೇ ಮೇಜಿನ ಮೇಲಿದೆ. ಸಭೆಯಲ್ಲಿ ಸ್ಲ್ಯಾಬ್ ಬದಲಾವಣೆ ಬಗ್ಗೆ ಬಹುಮತದಿಂದ ನಿರ್ಧಾರ‌ ಕೈಗೊಳ್ಳಲಾಗುವುದು. ಕೌನ್ಸಿಲ್‌ನ ಒಪ್ಪಿಗೆಯ ನಂತರ ಹೊಸ ದರಗಳ ಕುರಿತಾದ ಅಧಿಸೂಚನೆಗಳು 5-7 ದಿನಗಳಲ್ಲಿ ಜಾರಿಗೊಳ್ಳಬಹುದು. ಹೊಸ ನಿಯಮಗಳು ಸೆಪ್ಟೆಂಬರ್ 22 ರಿಂದ ಜಾರಿಗೆ ಬರುವ ಸಾಧ್ಯತೆ ಇದೆ.

ನಾಲ್ಕು ಸ್ಲ್ಯಾಬ್‌ಗಳ ಬದಲು ಎರಡು ಸ್ಲ್ಯಾಬ್‌ಗಳಿಗೆ ಇಳಿಕೆಗೆ ಕೇಂದ್ರ ಮುಂದಾಗಿದ್ದು, 5%, 12%, 18%, 28% ತೆರಿಗೆ ಪದ್ದತಿಗೆ ಪೂರ್ಣ ವಿರಾಮ ಹಾಕಿ, 5% ಮತ್ತು 18% ಸ್ಲ್ಯಾಬ್‌ಗಳನ್ನು ಉಳಿಸಿಕೊಳ್ಳಲು ಈಗಾಗಲೇ ಕೇಂದ್ರ ನಿರ್ಧರಿಸಿದೆ. 12% ವ್ಯಾಪ್ತಿಯಲ್ಲಿರುವ ಎಲ್ಲ ವಸ್ತುಗಳು 5% ಗೆ ಮತ್ತು 28% ನಲ್ಲಿರುವ ಎಲ್ಲ ವಸ್ತುಗಳ ತೆರಿಗೆಯನ್ನು 18% ಇಳಿಸಲು ತಿರ್ಮಾನಿಸಲಾಗಿದೆ. ಈ ಬಗ್ಗೆ ಈಗಾಗಲೇ ಸುಳಿವು ಕೂಡ ಸಿಕ್ಕಿದೆ.

ಇಂದಿನಿಂದ ಎರಡು ದಿನ ದೆಹಲಿಯಲ್ಲಿ ಜಿಎಸ್ ಟಿ ಕೌನ್ಸಿಲ್ ಸಭೆ ನಡೆಯಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ನೇತೃತ್ವ ವಹಿಸಲಿದ್ದಾರೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 31 ಸದಸ್ಯರು ಭಾಗಿಯಾಗಲಿದ್ದಾರೆ. ಒಟ್ಟು 33 ಸದಸ್ಯರ ಸಮ್ಮುಖದಲ್ಲಿ ಜಿಎಸ್‌ಟಿ ವ್ಯವಸ್ಥೆಯ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಯಲಿದೆ. ಸಾಧಕ-ಬಾಧಕಗಳ ಬಳಿಕ ಬಹುಮತದ ಮೂಲಕ ನಿರ್ಧಾರ ಕೈಗೊಳ್ಳಲಾಗುವುದು.

ಜಿಎಸ್‌ಟಿ ಪರಿಷ್ಕರಣೆಗೆ ಈಗಾಗಲೇ ಬಹುತೇಕ ರಾಜ್ಯಗಳು ಸಮ್ಮತಿ ಸೂಚಿಸಿವೆ.

ಪ್ರಸುತ್ತ ವ್ಯವಸ್ಥೆಯಲ್ಲಿ ಯಾವ ಸ್ಲ್ಯಾಬ್‌ಗಳಲ್ಲಿ ಯಾವ ವಸ್ತುಗಳಿವೆ?
0% GST ಯಾವುದೇ ತೆರಿಗೆ ಇಲ್ಲ
ವಸ್ತುಗಳು

  • ತಾಜಾ ಹಾಲು, ತಾಜಾ ಹಣ್ಣುಗಳು ಮತ್ತು ತರಕಾರಿಗಳು (ಬ್ರ್ಯಾಂಡ್ ಇಲ್ಲದವು)
  • ಅಕ್ಕಿ, ಗೋಧಿ, ರಾಗಿ ಮತ್ತು ಇತರ ಧಾನ್ಯಗಳು (ಬ್ರ್ಯಾಂಡ್ ಇಲ್ಲದವು)
  • ಮಾಂಸ, ಮೀನು (ಪ್ಯಾಕ್ ಮಾಡದವು)
  • ನೈಸರ್ಗಿಕ ಜೇನು (ಬ್ರ್ಯಾಂಡ್ ಇಲ್ಲದವು)
  • ಸಿಂಧೂರ, ಕಂಕಣ, ಬಳೆಗಳು
  • ಸ್ಯಾನಿಟರಿ ನ್ಯಾಪ್‌ಕಿನ್‌ಗಳು
  • ಪುಸ್ತಕಗಳು, ಸ್ಲೇಟ್‌ಗಳು, ಪೆನ್ಸಿಲ್‌ಗಳು (ಶೈಕ್ಷಣಿಕ)
    ಸೇವೆಗಳು
  • ಆರೋಗ್ಯ ಸೇವೆಗಳು (ಆಸ್ಪತ್ರೆಗಳು, ಚಿಕಿತ್ಸೆ)
  • ಶಿಕ್ಷಣ ಸೇವೆಗಳು (ಶಾಲೆ, ಕಾಲೇಜುಗಳು)
  • ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ತೆರೆದ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್ (BSBD) ಖಾತೆಗಳ ಸೇವೆಗಳು

    5% GST (ಈ ಸ್ಲ್ಯಾಬ್‌ನಲ್ಲಿ ದೈನಂದಿನ ಅಗತ್ಯ ವಸ್ತುಗಳು ಮತ್ತು ಕೆಲವು ಸೇವೆಗಳು ಸೇರಿವೆ)
    ವಸ್ತುಗಳು
  • ಸಕ್ಕರೆ, ಚಹಾ, ಕಾಫಿ (ರೋಸ್ಟೆಡ್ ಕಾಫಿ ಬೀನ್ಸ್)
  • ಖಾದ್ಯ ತೈಲ (ಎಡಿಬಲ್ ಆಯಿಲ್)
  • ಔಷಧಿಗಳು (ಜೀವರಕ್ಷಕ ಔಷಧಿಗಳು ಸೇರಿದಂತೆ)
  • ದೇಶೀ ಸಿಹಿತಿಂಡಿಗಳು (ಬಾಂದ್‌ವಾಲೆ, ಲಾಡು)
  • ತೂಗು 500 ರೂ.ಗಿಂತ ಕಡಿಮೆ ಇರುವ ಶೂಗಳು
  • ಎಲ್‌ಪಿಜಿ ಸಿಲಿಂಡರ್ (ಗೃಹಬಳಕೆ)
  • ಪ್ಯಾಕ್ ಮಾಡಿದ ಆಹಾರ ವಸ್ತುಗಳು (ಬ್ರ್ಯಾಂಡ್‌ ಇರುವವು, ಉದಾ: ಪ್ಯಾಕ್ ಮಾಡಿದ ಹಾಲು)
  • ಕೃಷಿ ಉಪಕರಣಗಳು
  • ರೋಗನಿರ್ಣಯ ಕಿಟ್‌ಗಳು

    -ಸೇವೆಗಳು
  • ರೈಲು ಪ್ರಯಾಣ (ಸಾಮಾನ್ಯ ದರ್ಜೆ, ಸ್ಲೀಪರ್)
  • ಆರ್ಥಿಕ ದರ್ಜೆಯ ವಿಮಾನ ಟಿಕೆಟ್‌ಗಳು
  • ಟೂರ್ ಆಪರೇಟರ್ ಸೇವೆಗಳು
  • ಕೆಲವು ಜಾಬ್ ವರ್ಕ್ ಸೇವೆಗಳು
    12% GST (ಈ ಸ್ಲ್ಯಾಬ್‌ನಲ್ಲಿ ಸಾಮಾನ್ಯವಾಗಿ ಬಳಸುವ, ಆದರೆ ಅಗತ್ಯವಲ್ಲದ ವಸ್ತುಗಳು ಮತ್ತು ಸೇವೆಗಳು ಸೇರಿವೆ)
    ವಸ್ತುಗಳು
  • ಬೆಣ್ಣೆ, ತುಪ್ಪ, ಚೀಸ್
  • ಮೊಬೈಲ್ ಫೋನ್‌ಗಳು
  • ಫ್ರೂಟ್ ಜ್ಯೂಸ್, ಒಣಗಿದ ಹಣ್ಣುಗಳು
  • ಆಗರ್‌ಬತ್ತಿ
  • ಛತ್ರಿಗಳು
  • ರೋಸ್ಟೆಡ್ ಚಿಕೋರಿ
  • ಇಟ್ಟಿಗೆಗಳು
  • 500 ರೂ.ಗಿಂತ ಹೆಚ್ಚಿರುವ ಶೂಗಳು
    ಸೇವೆಗಳು
  • ರೈಲು ಸರಕು ಸಾಗಾಟ
  • ವಿಮಾನ ಪ್ರಯಾಣ (ಆರ್ಥಿಕ ದರ್ಜೆಯಲ್ಲದವು)
  • ರಿಯಲ್ ಎಸ್ಟೇಟ್‌ನಲ್ಲಿ ವಾಣಿಜ್ಯ ಮತ್ತು ವಸತಿ ಲಾವಾದೇವಿಗಳು
  • ಹೋಟೆಲ್ ಕೊಠಡಿಗಳು (ದಿನಕ್ಕೆ 1,000 ರೂ. ರಿಂದ 7,500 ರೂ. ವರೆಗೆ)

    18% GST (ಈ ಸ್ಲ್ಯಾಬ್‌ನಲ್ಲಿ ಹೆಚ್ಚಿನ ಗ್ರಾಹಕ ಉತ್ಪನ್ನಗಳು ಮತ್ತು ಸೇವೆಗಳು ಸೇರಿವೆ)
    ವಸ್ತುಗಳು
  • ಕೂದಲ ಎಣ್ಣೆ, ಟೂತ್‌ಪೇಸ್ಟ್, ಸಾಬೂನು
  • ಐಸ್ ಕ್ರೀಮ್
  • ಕಾಸ್ಮೆಟಿಕ್ಸ್ (ಪರ್ಫ್ಯೂಮ್, ಟಾಯ್‌ಲೆಟ್‌ರೀಸ್)
  • ಮೊಬೈಲ್ ಫೋನ್‌ಗಳು
  • ಕಂಪ್ಯೂಟರ್ ಮಾನಿಟರ್‌ಗಳು, ಪ್ರಿಂಟರ್‌ಗಳು
  • ಪಾಸ್ಟಾ, ಕಾರ್ನ್‌ಫ್ಲೇಕ್ಸ್, ಬಿಸ್ಕತ್ತು
  • ಟಿವಿ (ನಿರ್ದಿಷ್ಟ ಗಾತ್ರದವರೆಗೆ)

    ಸೇವೆಗಳು
  • ಟೆಲಿಕಾಂ ಸೇವೆಗಳು
  • ರೆಸ್ಟೋರೆಂಟ್ ಸೇವೆಗಳು (ಆಲ್ಕೊಹಾಲ್ ಪರವಾನಗಿ ಇರುವವು)
  • ಈವೆಂಟ್ ಟಿಕೆಟ್‌ಗಳು
  • ಬಾಡಿಗೆ ಸೇವೆಗಳು
  • ಸಲಹಾ, ವೃತ್ತಿಪರ, ಕೊರಿಯರ್ ಮತ್ತು ಐಟಿ ಸೇವೆಗಳು
  • ಲೋನ್‌ಗಳ ಮೇಲಿನ ಪ್ರೊಸೆಸಿಂಗ್ ಶುಲ್ಕಗಳು (ಪ್ರಿನ್ಸಿಪಾಲ್ ಮತ್ತು ಬಡ್ಡಿಯ ಮೇಲೆ ಜಿಎಸ್‌ಟಿ ಇಲ್ಲ)

    28% GST (ಈ ಸ್ಲ್ಯಾಬ್‌ನಲ್ಲಿ ಐಷಾರಾಮಿ ವಸ್ತುಗಳು ಮತ್ತು ಸೇವೆಗಳು ಸೇರಿವೆ. ಕೆಲವು ವಸ್ತುಗಳಿಗೆ ಹೆಚ್ಚುವರಿ ಸೆಸ್ ಕೂಡ ವಿಧಿಸಲಾಗುತ್ತದೆ)
    ವಸ್ತುಗಳು
  • ಐಷಾರಾಮಿ ಕಾರುಗಳು, ಹೈ-ಎಂಡ್ ಮೋಟರ್‌ಸೈಕಲ್‌ಗಳು
  • ತಂಪು ಪಾನೀಯಗಳು (ಕೋಕ್, ಪೆಪ್ಸಿ)
  • ತಂಬಾಕು ಉತ್ಪನ್ನಗಳು, ಸಿಗರೇಟ್‌ಗಳು
  • ಎಸಿ, ರೆಫ್ರಿಜರೇಟರ್‌ಗಳು, ಡಿಶ್‌ವಾಶಿಂಗ್ ಮೆಷಿನ್‌ಗಳು
  • ಸಿಮೆಂಟ್
  • ಕಾಫಿ ಎಕ್ಸ್‌ಟ್ರಾಕ್ಟ್‌ಗಳು, ಎಸೆನ್ಸ್‌ಗಳು

    -ಸೇವೆಗಳು
  • ಗೇಮಿಂಗ್, ಜೂಜಾಟ, ಕ್ಯಾಸಿನೊಗಳು
  • ಐಷಾರಾಮಿ ಹೋಟೆಲ್ ವಸತಿಗಳು (ದಿನಕ್ಕೆ 7,500 ರೂ.ಗಿಂತ ಹೆಚ್ಚು)
  • ಅಮ್ಯೂಸ್‌ಮೆಂಟ್ ಪಾರ್ಕ್‌ಗಳು
    ವಿಶೇಷ ದರಗಳು
  • 0.25%: ಕಟ್ ಮಾಡಿದ ಮತ್ತು ಸೆಮಿ-ಪಾಲಿಶ್ ಮಾಡಿದ ಕಲ್ಲುಗಳು (ಉದಾ: ಡೈಮಂಡ್, ರತ್ನಗಳು)
  • 3%**: ಚಿನ್ನ, ಬೆಳ್ಳಿ, ಆಭರಣಗಳು (ಜಾಬ್ ವರ್ಕ್‌ಗೆ 5% ಜಿಎಸ್‌ಟಿ)
  • ಸೆಸ್ : ತಂಬಾಕು, ಏರಿಯೇಟೆಡ್ ವಾಟರ್, ಪೆಟ್ರೋಲ್, ಮೋಟಾರ್ ವಾಹನಗಳ ಮೇಲೆ 1% ರಿಂದ 204% ವರೆಗೆ ಸೆಸ್ ವಿಧಿಸಲಾಗುತ್ತದೆ.
    ಯಾವ ವಸ್ತುಗಳ ಬೆಲೆಯಲ್ಲಿ ನಿರೀಕ್ಷೆ ಮಾಡಬಹುದು?
  1. 12% ರಿಂದ 5% ಕ್ಕೆ ಸ್ಥಳಾಂತರಗೊಳ್ಳುವ ವಸ್ತುಗಳು
    – ಆಹಾರ ಉತ್ಪನ್ನಗಳು: ಪ್ಯಾಕ್ ಮಾಡಿದ ಒಣಗಿದ ಹಣ್ಣುಗಳು, ಫ್ರೂಟ್ ಜ್ಯೂಸ್, ದೇಶೀ ಸಿಹಿತಿಂಡಿಗಳು
    – ಗೃಹೋಪಯೋಗಿ ವಸ್ತುಗಳು: ಛತ್ರಿಗಳು, ಕೃಷಿ ಉಪಕರಣಗಳು, ಕೆಲವು ರೀತಿಯ ಶೂಗಳು (500 ರೂ.ಗಿಂತ ಹೆಚ್ಚಿನ ಬೆಲೆಯವು)
    – ಇತರೆ: ಆಗರ್‌ಬತ್ತಿ, ಕೆಲವು ಇಟ್ಟಿಗೆಗಳು, ಕೆಲವು ರೀತಿಯ ಬಟ್ಟೆಗಳು (ಗಾರ್ಮೆಂಟ್ಸ್)
  2. 28% ರಿಂದ 18% ಕ್ಕೆ ಸ್ಥಳಾಂತರಗೊಳ್ಳುವ ವಸ್ತುಗಳು
    – ಗೃಹೋಪಯೋಗಿ ಉಪಕರಣಗಳು;
  • ಏರ್ ಕಂಡಿಷನರ್‌ಗಳು (ಎಸಿ)
  • ರೆಫ್ರಿಜರೇಟರ್‌ಗಳು
  • ಟಿವಿಗಳು (32 ಇಂಚಿಗಿಂತ ದೊಡ್ಡವು)
  • ಡಿಶ್‌ವಾಶಿಂಗ್ ಮೆಷಿನ್‌ಗಳು
    – ದೈನಂದಿನ ಬಳಕೆಯ ವಸ್ತುಗಳು:
  • ಟೂತ್‌ಪೇಸ್ಟ್, ಸಾಬೂನು, ಶಾಂಪೂ
  • ಕಾಸ್ಮೆಟಿಕ್ಸ್ (ಕೆಲವು ರೀತಿಯವು)
  • ಏರ್ ಆಯಿಲ್

    ಇತರೆ
  • ಸಿಮೆಂಟ್
  • ಪೇಂಟ್ ಮತ್ತು ವಾರ್ನಿಷ್
  • ಸೆರಾಮಿಕ್ ಟೈಲ್ಸ್
  • ಸ್ಯಾನಿಟರಿ ವೇರ್
  • ಕೆಲವು ಎಲೆಕ್ಟ್ರಾನಿಕ್ಸ್ (ಕಂಪ್ಯೂಟರ್ ಮಾನಿಟರ್‌ಗಳು, ಪ್ರಿಂಟರ್‌ಗಳು)
  1. ವಿಶೇಷ ವಿನಾಯಿತಿಗಳು:
  • ಆರೋಗ್ಯ ಮತ್ತು ಜೀವ ವಿಮೆ : ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮೆಯ ಮೇಲಿನ ಜಿಎಸ್‌ಟಿಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಪ್ರಸ್ತಾವನೆ ಇದೆ. ಇದರಿಂದ ವಿಮಾ ಪ್ರೀಮಿಯಂಗಳ ಬೆಲೆ ಗಣನೀಯವಾಗಿ ಕಡಿಮೆಯಾಗಬಹುದು, ವಿಶೇಷವಾಗಿ ಮಧ್ಯಮ ವರ್ಗದವರಿಗೆ ಇದು ದೊಡ್ಡ ಉಳಿತಾಯವನ್ನು ಒದಗಿಸುತ್ತದೆ
  • ಕೃಷಿ, ಜವಳಿ, ಫಲವತ್ತತೆ, ನವೀಕರಿಸಬಹುದಾದ ಶಕ್ತಿ, ಆರೋಗ್ಯ, ಕರಕುಶಲ ವಸ್ತುಗಳು, ಸಾರಿಗೆ : ಈ ಕ್ಷೇತ್ರಗಳಲ್ಲಿನ ಉತ್ಪನ್ನಗಳು 5% ಸ್ಲ್ಯಾಬ್‌ಗೆ ಸ್ಥಳಾಂತರಗೊಂಗಲಿವೆ, ಇದರಿಂದ ರೈತರು, ಕಿರು-ಸಣ್ಣ ಉದ್ದಿಮೆಗಳು (MSMEs) ಮತ್ತು ಸಾಮಾನ್ಯ ಗ್ರಾಹಕರಿಗೆ ಪ್ರಯೋಜನವಾಗಲಿದೆ.
  • ನಿರ್ಮಾಣ ವಸ್ತುಗಳು: ಸಿಮೆಂಟ್ (28% ರಿಂದ 18%), ಸ್ಟೀಲ್ (18% ರಿಂದ 5% ಕ್ಕೆ ಸಂಭಾವ್ಯ ಸ್ಥಳಾಂತರ), ಪೇಂಟ್, ಸೆರಾಮಿಕ್ ಟೈಲ್ಸ್, ಮತ್ತು ಸ್ಯಾನಿಟರಿ ವೇರ್‌ಗಳ ಮೇಲಿನ ಜಿಎಸ್‌ಟಿ ಕಡಿಮೆಯಾದರೆ, ನಿರ್ಮಾಣ ವೆಚ್ಚ ಕಡಿಮೆಯಾಗುತ್ತದೆ. ಇದರಿಂದ ಅಂಡರ್-ಕನ್‌ಸ್ಟ್ರಕ್ಷನ್ ವಸತಿ ಯೋಜನೆಗಳ ಬೆಲೆ ಕಡಿಮೆಯಾಗಬಹುದು, ಇದು ಗೃಹ ಖರೀದಿದಾರರಿಗೆ ಪ್ರಯೋಜನಕಾರಿಯಾಗಿದೆ.
    ಈ ಕ್ರಮದಿಂದ ಮಧ್ಯಮ ವರ್ಗಕ್ಕೆ ತೆರಿಗೆ ಭಾರ ಇಳಿಕೆಯಾಗಲಿದ್ದು, ಶ್ರೀಮಂತರಿಗೆ ಹೊರೆಯಾಗಲಿದೆ. ಐಷರಾಮಿ ವಸ್ತುಗಳ ಮೇಲಿನ ತೆರಿಗೆ ಏರಿಕೆಗೆ ತಯಾರಿ ನಡೆದಿದ್ದು, 5%, 18% ಜೊತೆಗೆ 40% ಹೊಸ ಸ್ಲ್ಯಾಬ್ ಸೇರ್ಪಡೆ ಆಗಲಿದೆ. ತಂಬಾಕು, ಪಾನ್ ಮಸಾಲ, ಏರಿಯೇಟೆಡ್ ಪಾನೀಯಗಳು, ಐಷಾರಾಮಿ ಕಾರುಗಳು, ಮತ್ತು ಆನ್‌ಲೈನ್ ಗೇಮಿಂಗ್‌ನಂತಹ ಉತ್ಪನ್ನಗಳು ಮೇಲೆ ತೆರಿಗೆ ಏರಿಕೆ ಆಗಬಹುದು. 28% ರಿಂದ 40% ಏರಿಕೆಗೆ ಸರ್ಕಾರದ ಚಿಂತನೆ ನಡೆಸಿದೆ. ಕೆಲವು ಐಷಾರಾಮಿ ವಾಹನಗಳು 40% ಸ್ಲ್ಯಾಬ್‌ಗೆ ಸೇರಬಹುದು.
Tags: GSTGST Board meetingKarnataka News beatnewdelhi
SendShareTweet
Previous Post

ದಸಾರ ಉದ್ಘಾಟನೆ | ಇಂದು ಬಾನು ಮುಷ್ತಾಕ್ ಅವರಿಗೆ ಅಧಿಕೃತ ಆಹ್ವಾನ

Next Post

ಹಾಸನ : ವ್ಯಾಪಕ ಮಳೆಗೆ ಕುಸಿದ ಗುಡ್ಡ

Related Posts

ವ್ಯಕ್ತಿತ್ವದ ಹಕ್ಕುಗಳನ್ನು ರಕ್ಷಿಸುವಂತೆ ಕೋರಿ ಕೋರ್ಟ್‌ ಮೊರೆ ಹೋದ ವಿಶ್ವ ಸುಂದರಿ !
ದೇಶ

ವ್ಯಕ್ತಿತ್ವದ ಹಕ್ಕುಗಳನ್ನು ರಕ್ಷಿಸುವಂತೆ ಕೋರಿ ಕೋರ್ಟ್‌ ಮೊರೆ ಹೋದ ಮಾಜಿ ವಿಶ್ವ ಸುಂದರಿ !

ಧರ್ಮಸ್ಥಳ ಪ್ರಕರಣ | ಶಾ ಅವರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ, ಚರ್ಚೆ
ದೇಶ

ಧರ್ಮಸ್ಥಳ ಪ್ರಕರಣ | ಶಾ ಅವರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ, ಚರ್ಚೆ

ಉಪರಾಷ್ಟ್ರಪತಿ ಚುನಾವಣೆ: ಮತದಾನ ಆರಂಭ, ‘ತೆಲುಗು’ ಅಸ್ತ್ರ ಪ್ರಯೋಗಿಸಿದ ಕಾಂಗ್ರೆಸ್
ದೇಶ

ಉಪರಾಷ್ಟ್ರಪತಿ ಚುನಾವಣೆ: ಮತದಾನ ಆರಂಭ, ‘ತೆಲುಗು’ ಅಸ್ತ್ರ ಪ್ರಯೋಗಿಸಿದ ಕಾಂಗ್ರೆಸ್

ಹಿಮಾಚಲ ಪ್ರದೇಶಕ್ಕೆ ಸಂಪೂರ್ಣ ಸಾಕ್ಷರತಾ ರಾಜ್ಯದ ಗರಿ: ಈ ಸಾಧನೆ ಮಾಡಿದ ಇತರೆ ರಾಜ್ಯಗಳಾವುವು?
ದೇಶ

ಹಿಮಾಚಲ ಪ್ರದೇಶಕ್ಕೆ ಸಂಪೂರ್ಣ ಸಾಕ್ಷರತಾ ರಾಜ್ಯದ ಗರಿ: ಈ ಸಾಧನೆ ಮಾಡಿದ ಇತರೆ ರಾಜ್ಯಗಳಾವುವು?

ಉಪ ರಾಷ್ಟ್ರಪತಿ ಚುನಾವಣೆ | ಮೊದಲ ಮತದಾನ ಮಾಡಿದ ನಮೋ
ದೇಶ

ಉಪ ರಾಷ್ಟ್ರಪತಿ ಚುನಾವಣೆ | ಮೊದಲ ಮತದಾನ ಮಾಡಿದ ನಮೋ

ಸಾಮಾಜಿಕ ಜಾಲತಾಣಗಳನ್ನು ಬಳಸುವಂತೆ ಸಂಸದರಿಗೆ ನಮೋ ಕರೆ
ದೇಶ

ಸಾಮಾಜಿಕ ಜಾಲತಾಣಗಳನ್ನು ಬಳಸುವಂತೆ ಸಂಸದರಿಗೆ ನಮೋ ಕರೆ

Next Post
ಹಾಸನ : ವ್ಯಾಪಕ ಮಳೆಗೆ ಕುಸಿದ ಗುಡ್ಡ

ಹಾಸನ : ವ್ಯಾಪಕ ಮಳೆಗೆ ಕುಸಿದ ಗುಡ್ಡ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪರಮೇಶ್ವರ್‌ ಅಸಮರ್ಥ ಗೃಹ ಸಚಿವ : ಶೋಭಾ ಆಕ್ರೋಶ

ಪರಮೇಶ್ವರ್‌ ಅಸಮರ್ಥ ಗೃಹ ಸಚಿವ : ಶೋಭಾ ಆಕ್ರೋಶ

ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಪಾಕ್‌ ಪರ ಘೋಷಣೆ | ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ : ಮಧು ಬಂಗಾರಪ್ಪ

ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಪಾಕ್‌ ಪರ ಘೋಷಣೆ | ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ : ಮಧು ಬಂಗಾರಪ್ಪ  

ಆಟೋ ಬುಕ್‌ ಮಾಡಿ ಚಾಲಕನ ಸುಲಿಗೆ | ಮೂವರ ಬಂಧನ

ಆಟೋ ಬುಕ್‌ ಮಾಡಿ ಚಾಲಕನ ಸುಲಿಗೆ | ಮೂವರ ಬಂಧನ

ಧರ್ಮಸ್ಥಳದ ಪರ ನಿಂತ ನಟ ಪವನ್ ಕಲ್ಯಾಣ್

ಧರ್ಮಸ್ಥಳದ ಪರ ನಿಂತ ನಟ ಪವನ್ ಕಲ್ಯಾಣ್

Recent News

ಪರಮೇಶ್ವರ್‌ ಅಸಮರ್ಥ ಗೃಹ ಸಚಿವ : ಶೋಭಾ ಆಕ್ರೋಶ

ಪರಮೇಶ್ವರ್‌ ಅಸಮರ್ಥ ಗೃಹ ಸಚಿವ : ಶೋಭಾ ಆಕ್ರೋಶ

ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಪಾಕ್‌ ಪರ ಘೋಷಣೆ | ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ : ಮಧು ಬಂಗಾರಪ್ಪ

ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಪಾಕ್‌ ಪರ ಘೋಷಣೆ | ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ : ಮಧು ಬಂಗಾರಪ್ಪ  

ಆಟೋ ಬುಕ್‌ ಮಾಡಿ ಚಾಲಕನ ಸುಲಿಗೆ | ಮೂವರ ಬಂಧನ

ಆಟೋ ಬುಕ್‌ ಮಾಡಿ ಚಾಲಕನ ಸುಲಿಗೆ | ಮೂವರ ಬಂಧನ

ಧರ್ಮಸ್ಥಳದ ಪರ ನಿಂತ ನಟ ಪವನ್ ಕಲ್ಯಾಣ್

ಧರ್ಮಸ್ಥಳದ ಪರ ನಿಂತ ನಟ ಪವನ್ ಕಲ್ಯಾಣ್

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಪರಮೇಶ್ವರ್‌ ಅಸಮರ್ಥ ಗೃಹ ಸಚಿವ : ಶೋಭಾ ಆಕ್ರೋಶ

ಪರಮೇಶ್ವರ್‌ ಅಸಮರ್ಥ ಗೃಹ ಸಚಿವ : ಶೋಭಾ ಆಕ್ರೋಶ

ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಪಾಕ್‌ ಪರ ಘೋಷಣೆ | ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ : ಮಧು ಬಂಗಾರಪ್ಪ

ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಪಾಕ್‌ ಪರ ಘೋಷಣೆ | ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ : ಮಧು ಬಂಗಾರಪ್ಪ  

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat