ಬೆಂಗಳೂರು : ಸಚಿವ ಜಮೀರ್ ಅಹಮ್ಮದ್ ಖಾನ್ ಅವರೊಂದಿಗೆ ಹಣಕಾಸಿನ ವಹಿವಾಟು ನಡೆಸಿರುವ ಹಿನ್ನಲೆ ಕೆಜಿಎಫ್ ಬಾಬು ಅವರಿಗೆ ಲೋಕಾಯುಕ್ತಾ ಪೊಲೀಸರಿಂದ ನೋಟಿಸ್ ನೀಡಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಲ್ಲಿ ಲೋಕಾಯುಕ್ತಾ ಪೊಲೀಸರು ಉಲ್ಲೇಖಿಸಿದ್ದಾರೆ. ಕೇಳಿದ ದಾಖಲಾತಿಯನ್ನು ಈವರೆಗೆ ಸಲ್ಲಿಸಿಲ್ಲ. ಹಾಗಾಗಿ ಹಣಕಾಸಿವ ವಹಿವಾಟಿನ ಬಗ್ಗೆ ಸೂಕ್ತ ದಾಖಲಾತಿಯನ್ನು ನೋಟಿಸ್ ತಲುಪಿದ ಏಳು ದಿನಗಳೊಳಗೆ ಸಲ್ಲಿಸುವಂತೆ ಮತ್ತು ವಿಚಾರಣೆಗೆ ಹಾಜರಾಗುವಂತೆ ಉಲ್ಲೇಖಿಸಲಾಗಿದೆ.
ಈ ಹಿಂದೆ ಆಗಸ್ಟ್ 22 ರಂದು ಲೋಕಾಯುಕ್ತಾ ಪೊಲೀಸರು ನೋಟೀಸ್ ನೀಡಿದ್ದರು. ಆದಾಗ್ಯೂ ಕೆಜಿಎಫ್ ಬಾಬು ವಿಚಾರಣೆಗೆ ಹಾಜರಾಗಿಲ್ಲ. ಆ ಹಿನ್ನೆಲೆಯಲ್ಲಿ ಮತ್ತೆ ನೋಟೀಸ್ ನೀಡಿದ್ದಾರೆ.
