ಬೆಂಗಳೂರು: ಧರ್ಮಸ್ಥಳ ಪ್ರಕರಣವನ್ನು ಎನ್‌ಐಎ ತನಿಖೆ ಮಾಡಲು ನೀಡುವಂತೆ ಬಿಜೆಪಿ ಪಟ್ಟು ಹಿಡಿದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ. ಪರಮೇಶ್ವರ್, ಈಗಾಗಲೇ ಎಸ್ ಐಟಿ ತನಿಖೆ ಮಾಡುತ್ತಿದೆ.
ನಾವು ಎನ್ ಐಎಗೆ ಕೊಡುವುದಿಲ್ಲ, ತನಿಖೆ ಮುಗಿಯುವವರೆಗೂ ಏನೂ ಕೊಡುವುದಿಲ್ಲ, ಅವರ ಉದ್ದೇಶ ಏನಿದೆ ಗೊತ್ತಿಲ್ಲ. ತನಿಖೆಗೆ ಅಡ್ಡಿಮಾಡುವ ಪ್ರಯತ್ನ ಬರಬಹುದು. ತನಿಖೆಯಲ್ಲಿ ತಪ್ಪಿದ್ದರೆ ಇನ್ನೊಂದು ಏಜೆನ್ಸಿ ಬರುತ್ತದೆ. ನಾವು ಎನ್ ಐಎಗೆ ಕೊಡುವ ವಿಚಾರ ಇಲ್ಲ, ಅವರು ತನಿಖೆ ಮಾಡುವುದಿದ್ದರೆ ಮಾಡಲಿ, ಅವರದ್ದೇ ಬೇರೆ ಆಯಾಮದಲ್ಲಿ ಮಾಡಲಿ, ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ ಎಂದು ಪರಮೇಶ್ವರ್ ಹೇಳಿದರು.
ಇದೇ ವೇಳೆ ಮೊಹಂತಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೊಹಂತಿ ಧರ್ಮಸ್ಥಳದ ಬಗ್ಗೆಯಷ್ಟೇ ಮಾತಾಡುವುದಕ್ಕೆ ಬರುವುದಿಲ್ಲ. ಬೇರೆ ಬೇರೆ ವಿಚಾರದಲ್ಲೂ ಬರುತ್ತಾರೆ. ಎಸ್ ಐಟಿ ಮಾಡಿದ್ದೇವೆ, ತನಿಖೆ ಆಗುತ್ತಿದೆ. ಅಲ್ಲಿಂದ ವರದಿ ಬರಬೇಕು. ಚಿನ್ನಯ್ಯ ಏನು ಹೇಳಿದ್ದಾನೆ ಅದರ ಮೇಲೆ ಎಸ್ ಐಟಿಯವರು ತನಿಖೆ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.