ಬೆಂಗಳೂರು : ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ರವಿಕುಮಾರ್‌ರನ್ನ ಭೋವಿ ನಿಮಗದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಬಡವರ ಪರ ಕೆಲಸ ಮಾಡಬೇಕಿತ್ತು. ಆದರೇ, ಕಮಿಷನ್ ಪಡೆಯುತ್ತಿದ್ದಾರೆ. ಮಧ್ಯವರ್ತಿಗಳೊಂದಿಗೆ ಶೇ.60ರಷ್ಟು ಕಮೀಷನ್ ಕೇಳಿರುವ ವಿಡಿಯೋ ಕೂಡ ಇದೆ. ಬಿಜೆಪಿ ಮೇಲೆ ಆರೋಪ ಮಾಡಿ ಇವರು ಅಧಿಕಾರಕ್ಕೆ ಬಂದಿದ್ದರು. ಈಗ ಭೋವಿ ನಿಮಗದ ಅಧ್ಯಕ್ಷರು ಶೇ. 60ರಷ್ಟು ಕಮೀಷನ್ ಕೇಳಿದ್ದಾರೆ ಎಂದು ಭೋವಿ ಸಮಾಜ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ. ವೆಂಕಟೇಶ್ ಮೌರ್ಯ ಹೇಳಿದ್ದಾರೆ.
ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಕಚೇರಿಯಲ್ಲಿ ಇವರು ಕಮೀಷನ್ ಕೇಳಿದ್ದಾರೆ. ಮಧ್ಯವರ್ತಿಯೊಂದಿಗೆ ಮಾತನಾಡಿರುವ ವೀಡಿಯೋ ಇದೆ. ಕುಮಾರ ಕೃಪಾ ಗೆಸ್ಟ್ ಹೌಸ್‌ನಲ್ಲಿ 10 ಲಕ್ಷ ಪಡೆದಿರುವ ವೀಡಿಯೋ ಕೂಡ ಇದೆ ಎಂದು ಅವರು ಹೇಳಿದ್ದಾರೆ.
ಭೋವಿ ಸಮಾಜದವರೆ ಅಧ್ಯಕ್ಷರಾದರೆ ಸಮಾಜ ಸುಧಾರಣೆ ಆಗುತ್ತದೆ ಎಂದು ಚಿಂತಿಸುವುದು ಸಹಜ. ಆದರೇ, ಹೀಗೆ ಬಡವರ ಹಣಕ್ಕೆ ಕಣ್ಣಿಡುವುದು ಖಂಡನೀಯ. ನಿಗಮ ಮಂಡಳಿಗಳ ಅಧ್ಯಕ್ಷರನ್ನು ಕರೆದು ಡಿಸಿಎಂ ಅವರೇ ಸೂಚನೆ ನೀಡಿದ್ದಾರೆ ಎಂದು ಸ್ವತಃ ರವಿಕುಮಾರ್ ಅವರೇ ಹೇಳಿದ್ದರು. ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಸ್ಟಿಂಗ್ ಆಫರೇಷನ್ ಮಾಡುತ್ತಾರೆ, ಎಚ್ಚರವಾಗಿರಬೇಕು ಎಂದು ಡಿಸಿಎಂ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ಹೇಳಿದ್ದರು. ಇದರ ಅರ್ಥ ಏನು ಎನ್ನುವುದನ್ನು ನಾವು ಯೋಚಿಸಬೇಕು. ರವಿಕುಮಾರ್ ಪ್ರಾಮಾಣಿಕನಾಗಿದ್ದರೇ, ಇಂದೇ ಅವರು ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಾಮಾಣಿಕ ಎಂದು ರಾಜೀನಾಮೆ ಕೊಟ್ಟು ತನಿಖೆಯನ್ನು ಎದುರಿಸಿ ಸಾಬೀತು ಮಾಡಲಿ. ಸಿಎಂ ಸಿದ್ದರಾಮಯ್ಯ ಅವರು ಅಹಿಂದ ನಾಯಕರು ಹೌದಾದರೇ ಇವರ ಮೇಲೆ ಸೂಕ್ತ ಕ್ರಮ ವಹಿಸಲಿ ಎಂದು ಆಗ್ರಹಿಸಿದ್ದಲ್ಲದೇ, ಈ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಮಗೆ ರಾಜ್ಯ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ. ರವಿ ಕುಮಾರ್‌ನ ಪದಚ್ಯುತಿ ಮಾಡದಿದ್ದರೆ ನಾವು ಹೋರಾಟ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಮತ್ತು ಎಚ್ ಸಿ ಮಹಾದೇವಪ್ಪ ಎಲ್ಲೇ ಕಾರ್ಯಕ್ರಮ ಮಾಡಿದರು ಘೇರಾವ್ ಹಾಕುತ್ತೇವೆ. ಸಚಿವರು, ಡಿಸಿಎಂ, ಸಿಎಂ ಬೆಂಬಲ ಇಲ್ಲದೇ ಹೀಗೆ ಮಾಡಲಾಗುತ್ತದೆ. ಸರ್ಕಾರದ ಭಾಗದಾರಿಕೆ ಇಲ್ಲದೇ ಇಂತಹ ಭ್ರಷ್ಟಾಚಾರ ನಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.



















