ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಅಸಹಜ ಸಾವಿಗೀಡಾದ ಹಲವಾರು ಶವಗಳನ್ನು ಅಕ್ರಮವಾಗಿ ಧರ್ಮಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೂತಿಟ್ಟಿದ್ದೇನೆ ಎಂದು ದೂರುದಾರನ ಆರೋಪದ ಮೇಲೆ ಎಸ್.ಐ.ಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲೇ ಎಲ್ಲಾ ಆರೋಪಿಗಳಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೆ ಬೆಂಗಳೂರು, ಉಜಿರೆಗಳಲ್ಲಿ ಮೊದಲ ಹಂತದ ಸ್ಥಳ ಮಹಜರು ಪ್ರಕ್ರಿಯೆ ಮುಗಿಸಿರುವ ಎಸ್.ಐ.ಟಿ. ತನಿಖೆಯ ಮುಂದಿನ ಹಂತಕ್ಕೆ ತೆರಳಿದೆ. ಇನ್ನೂ ಕೆಲವೆಡೆ ಪರಿಶೀಲನೆ ಹಾಗೂ ಮಹಜರು ಕಾರ್ಯ ನಡೆಯಬೇಕಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಆರೋಪಿಗಳನ್ನೂ ಕೂಡ ವಿಚಾರಣೆಗೆ ಬುಲಾವ್ ನೀಡುವ ಸಾಧ್ಯತೆ ಇದೆ.
ಈವರೆಗೆ ನಡೆದಿರುವ ಮಹಜರು ಹಾಗೂ ಪರಿಶೀಲನೆಯ ಸಂದರ್ಭದಲ್ಲಿ ಆರೋಪಿಗಳ ಬಗ್ಗೆ ಹಲವು ಸಾಕ್ಷಿಗಳು ಪತ್ತೆಯಾಗಿವೆ. ಸಾಕ್ಷಿ ದೂರುದಾರ ಆರೋಪಿ ಚಿನ್ನಯ್ಯನ ಹೇಳಿಕೆ ಹಾಗೂ ಸಿಕ್ಕ ಸಾಕ್ಷಿಯ ಹಿನ್ನೆಲೆ ನೋಟಿಸ್ ನೀಡುವುದಕ್ಕೆ ಸಾಧ್ಯತೆ ಮಾಡಿಕೊಳ್ಳಲಾಗಿದೆ.
ಇಂದು(ಸೋಮವಾರ) ಚಿನ್ನಯ್ಯನ ಕಸ್ಟಡಿ ಪ್ರಕ್ರಿಯೆ ಮುಗಿಸಿದ ಬಳಿಕ ನೊಟೀಸ್ ನೀಡಲು ಎಸ್.ಐ.ಟಿ ಅಧಿಕಾರಿಗಳು ಸಿದ್ಧತೆ ನಡೆಸಿಕೊಂಡಿದ್ದಾರೆ.
“ಜಯಂತ್ ,ಮಹೇಶ್ ಶೆಟ್ಟಿ , ಗಿರೀಶ್ ಮಟ್ಟಣ್ಣ ಬಂಧನ ಯಾಕಿಲ್ಲ ?”
ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಂತ್, ಗಿರೀಶ್ ಮಟ್ಟಣ್ಣನವರ್ ಮೇಲೆ ಇಷ್ಟೆಲ್ಲ ಆರೋಪಗಳು ಕೇಳಿ ಬಂದರೂ ಆರೋಪಿತರ ಬಂಧನ ಆಗದೆ ಇರುವುದಕ್ಕೆ ಕಾರಣವಿದೆ. 164 ಹೇಳಿಕೆಗಳನ್ನು ಚಿನ್ನಯ್ಯ ನೀಡಿದ್ದ. ಆರೋಪಿ ಅಥವಾ ಸಾಕ್ಷಿಗಳು ‘ಉಲ್ಟಾ’ ಹೊಡೆಯದಂತೆ ನ್ಯಾಯಾಧೀಶರ ಸಮ್ಮುಖದಲ್ಲಿ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಪೊಲೀಸ್ ಹೇಳಿಕೆಗಳಿಗೆ ನ್ಯಾಯಾಲಯದಲ್ಲಿ ಮಾನ್ಯತೆ ಇರದ ಕಾರಣ ನ್ಯಾಯಾಲಯದಲ್ಲಿ ಆರೋಪಿಗಳ ಹೇಳಿಕೆಗಳನ್ನು ದಾಖಲು ಮಾಡಲಾಗುತ್ತದೆ. ಈ ವೇಳೆ ಚಿನ್ನಯ್ಯ ಹೇಳಿಕೆ ನೀಡಿರುವುದು ಸುಳ್ಳು ಎಂದು ತಿಳಿದುಬಂದಿದೆ. 164 ಹೇಳಿಕೆಗಳಲ್ಲಿ ಚಿನ್ನಯ್ಯ ಹೇಳಿರುವುದೊಂದು ಸ್ಥಳ ಮಹಜರಿನ ವೇಳೆ ತಿಳಿದು ಬಂದಿರುವುದು ಮತ್ತೊಂದು.
ಚಿನ್ನಯ್ಯ ನೀಡಿರುವ ಹೇಳಿಕೆ ಆಧಾರದ ಮೇಲೆ ಸ್ಥಳ ಪರಿಶೀಲನೆಯನ್ನು ಎಸ್.ಐ.ಟಿ ಅಧಿಕಾರಿಗಳು ಮಾಡಿದ್ದರು. ಚಿನ್ನಯ್ಯನ ಹೇಳಿಕೆಗಳಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್ ಪಾತ್ರದ ಬಗ್ಗೆ ಎಲ್ಲಿಯೂ ಚಿನ್ನಯ್ಯ ಬಿಟ್ಟುಕೊಟ್ಟಿರಲಿಲ್ಲ. ಆದರೇ, ಸ್ಥಳ ಮಹಜರು ಬೇಳೆ ನಿಜಾಂಶ ಬೆಳಕಿಗೆ ಬಂದಿದೆ ಎಂಬ ಮಾಹಿತಿ ಈಗ ಲಭ್ಯವಾಗಿದೆ. ಸ್ಥಳ ಮಹಜರು ವೇಳೆ ಸಿಕ್ಕ ಆಧಾರದ ಮೇಲೆ ಆರೋಪಿಗಳಿಗ ಎಸ್. ಐ.ಟಿ ನೋಟಿಸ್ ನೀಡಿ ಮುಂದಿನ ವಿಚಾರಣೆ ನಡೆಸಬಹುದು ಎಂಬ ಮಾಹಿತಿ ಈಗ ಲಭ್ಯವಾಗಿದೆ.
“ವಿದ್ಯಾರಣ್ಯಪುರ ಲಾಡ್ಜ್ ನಲ್ಲಿ ಐದು ಜನರ ಸಭೆ”
ಮಹೇಶ್ ಶೆಟ್ಟಿ, ಜಯಂತ್, ಗಿರೀಶ್ ಮಟ್ಟಣ್ಣನವರ್, ಸುಜಾತ ಭಟ್ ಹಾಗೂ ಚಿನ್ನಯ್ಯನ ಜೊತೆ ಸಭೆ ಸೇರಿರುವ ಬಗ್ಗೆ ಚೆನ್ನಯ್ಯ ಮಾಹಿತಿ ನೀಡಿದ್ದಾನೆಂದು ತಿಳಿದು ಬಂದಿದ್ದು, ಸಭೆಯಲ್ಲಿ ಆಯಾ ವ್ಯಕ್ತಿಗಳಿಗೆ ಜವಾಬ್ದಾರಿಗಳನ್ನು ನೀಡಲಾಗಿತ್ತು.
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಮಾಡಲು ಕೆಲಸ ವಹಿಸಿಕೊಡಲಾಗಿತ್ತು. ನಂತರ ಬುರೆಡೆ ಸಮೇತ ದೆಹಲಿಗೆ ಹೋಗಿದ್ದ ಬಗ್ಗೆ ಕೂಡ ಉಲ್ಲೇಖಿಸಿದ್ದಾನಂತೆ. ವಿಮಾನದಲ್ಲಿ ಸ್ಕ್ಯಾನಿಂಗ್ ವೇಳೆ ವಿಚಾರ ಬಯಲಾಗುವ ಹಿನ್ನಲೆಯಲ್ಲಿ ದೆಹಲಿಗೆ ಕಾರಿನಲ್ಲೇ ಹೋಗಿರುವುದಾಗಿ ಚಿನ್ನಯ್ಯ ಹೇಳಿಕೊಂಡಿದ್ದಾನಂತೆ.
ಸದ್ಯ ವಿಡಿಯೋ ರೆಕಾರ್ಡ್ ಮಾಡುವ ಮೂಲಕ ಎಸ್.ಐ.ಟಿ ಅಧಿಕಾರಿಗಳು ದಾಖಲು ಮಾಡಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಉಳಿದ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿ ಬಂಧಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.


















