ಈಗ ಟ್ರೆಂಡಿಗ್ ನಲ್ಲಿರುವ ಸುದ್ದಿ ಎಂದರೆ ಆ್ಯಂಕರ್ ಅನುಶ್ರೀ ಮದುವೆ. ತಮ್ಮ ಚಟಪಟ ಮಾತುಗಳಿಂದಲೇ ಎಲ್ಲರ ಮನೆಮಾತಾಗಿದ್ದ ಅನುಶ್ರೀ ಆ. 28ರಂದು ಕಗ್ಗಲೀಪುರದ ರೆಸಾರ್ಟ್‌ನಲ್ಲಿ ಕೊಡಗು ಮೂಲದ ರೋಷನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅನುಶ್ರೀ ವಿವಾಹವನ್ನು ಕಂಡು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಆದರೂ ಕೆಲವೊಂದಿಷ್ಟು ಗೊಂದಲಗಳಿವೆ. ಇನ್ನು ಮುಂದೆ ಅನುಶ್ರೀ ಅವರು ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಮುಂದುವರೆಯುತ್ತಾರಾ? ಎನ್ನುವ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.
ಈ ಬಗ್ಗೆ ಅನುಶ್ರೀ ಅವರಿಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೇ ಅನುಶ್ರೀ ಅವರು ಶಾಕಿಂಗ್ ಉತ್ತರ ಕೊಟ್ಟಿದ್ದಾರೆ. ಅದೇನೆಂದರೆ, ನಾಡಿದ್ದೇ ನಾನು ಡ್ಯೂಟಿಗೆ ಜಾಯಿನ್ ಆಗುತ್ತಿದ್ದೇನೆ. ಇವರು ಅಂದ್ರೆ ರೋಷನ್ ಕೂಡ ಡ್ಯೂಟಿಗೆ ಹೋಗುತ್ತಿದ್ದಾರೆ ಎಂದಿದ್ದಾರೆ. ಈ ವಿಷಯ ಕೇಳಿದ ನೆಟ್ಟಿಗರು ಬೆಸ್ಟ್ ಕಪಲ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ, ಅನುಶ್ರೀ ಪತಿಯ ಹೆಸರು ರೋಷನ್. ರಾಮಮೂರ್ತಿ ಹಾಗೂ ಸಿಸಿಲಿಯಾ ಇವರ ತಂದೆ-ತಾಯಿ. ರೋಷನ್ ಮೂಲತಃ ಕೊಡಗಿನವರಾಗಿದ್ದು, ಉದ್ಯಮಿಯಾಗಿದ್ದಾರೆ.
ಅನುಶ್ರೀ ಹಾಗೂ ರೋಷನ್ ಅವರು ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದು, ಇವರದ್ದು ಲವ್ ಕಂ ಅರೇಂಜ್ಡ್ ಮ್ಯಾರೇಜ್ ಎಂದು ಹೇಳಲಾಗುತ್ತಿದೆ. ಜೊತೆಗೆ ಅನುಶ್ರೀ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮಾಡುತ್ತಿದ್ದು, ಆ್ಯಂಕರ್ ಅನುಶ್ರೀ ಅನ್ನೋ ಯೂಟ್ಯೂಬ್ ಚಾನಲ್ ಅನ್ನು ಹೊಂದಿದ್ದಾರೆ.


















