ಬೆಂಗಳೂರು: ಪ್ರತಿ ತಿಂಗಳ 1ನೇ ತಾರೀಖಿನಂದು ಕೆಲ ಹಣಕಾಸು ನಿಯಮಗಳು ಬದಲಾಗುತ್ತಿರುತ್ತವೆ. ಅದರಂತೆ, ಸೆಪ್ಟೆಂಬರ್ 1ರಿಂದಲೂ ಹಣಕಾಸು ನಿಯಮಗಳು ಬದಲಾಗುತ್ತಿವೆ. ಅದರಲ್ಲೂ, ಎಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಭಾರಿ ಬದಲಾವಣೆ ಆಗುತ್ತಿವೆ. ಹಾಗಾಗಿ, ಈ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವವರು ಬದಲಾವಣೆಯಾಗುವ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ವಹಿವಾಟು ನಡೆಸಬೇಕಾಗಿದೆ. ಐಸಿಐಸಿಐ ಎಟಿಎಂ ಕಾರ್ಡ್ ಮೂಲಕ ಹಣ ವಿತ್ ಡ್ರಾ ನಿಯಮವೂ ಬದಲಾಗುತ್ತಿದೆ.
ಸೆಪ್ಟೆಂಬರ್ 1ರಿಂದ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ಥರ್ಡ್ ಪಾರ್ಟಿ ಪೇಮೆಂಟ್ ವ್ಯವಸ್ಥೆ ಮೂಲಕ ಹಣ ಪಾವತಿಸಿದರೆ ಶೇ.1ರಷ್ಟು ಶುಲ್ಕ ವಿಧಿಸಲಾಗುತ್ತದೆ. ವಿದ್ಯುತ್, ನೀರು, ಗ್ಯಾಸ್ ಸೇರಿ ಮುಂತಾದ ಯುಟಿಲಿಟಿ ಬಿಲ್ (Utility bill) ಪಾವತಿಗೂ ಹೆಚ್ಚುವರಿ ಶುಲ್ಕ ಜಾರಿಯಾಗಲಿದೆ. ಹಾಗಾಗಿ, ಕ್ರೆಡಿಟ್ ಕಾರ್ಡ್ ಮೂಲಕ ಈ ರೀತಿಯ ಪಾವತಿ ಮಾಡುವುದು ಹೆಚ್ಚುವರಿ ಶುಲ್ಕಕ್ಕೆ ಕಾರಣವಾಗಲಿದೆ.
ಹಾಗೆಯೇ, ಸೆಪ್ಟೆಂಬರ್ 1ರಿಂದ ಐಸಿಐಸಿಐ ಬ್ಯಾಂಕ್ ಎಟಿಎಂ ವಹಿವಾಟಿನ ನಿಯಮಗಳು ಬದಲಾಗುತ್ತಿವೆ. ಪ್ರತಿ ತಿಂಗಳು ಐದು ಬಾರಿ ಮಾತ್ರ ಎಟಿಎಂಗಳಿಂದ ಉಚಿತವಾಗಿ ಎಂಟಿಎಂಗಳ ಮೂಲಕ ಹಣ ವಿತ್ ಡ್ರಾ ಮಾಡಬಹುದಾಗಿದೆ. ಹಾಗೆಯೇ, ಮೆಟ್ರೋ ನಗರಗಳಲ್ಲಿ ಈ ಮಿತಿ ಇನ್ನೂ ಕಡಿಮೆಯಾಗಲಿದ್ದು, ಮೂರು ಬಾರಿ ಮಾತ್ರ ಉಚಿತವಾಗಿ ಎಂಟಿಎಂ ಮೂಲಕ ಹಣ ಡ್ರಾ ಮಾಡಬಹುದಾಗಿದೆ. ನಿಗದಿತ ಮಿತಿಗಳಿಗಿಂತ ಹೆಚ್ಚು ಬಾರಿ ವಿತ್ ಮಾಡಿದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.
ಇದರ ಜತೆಗೆ ಸೆಪ್ಟೆಂಬರ್ 1 ರಿಂದ ಎಸ್ ಬಿ ಐ ಆಯ್ದ ಕಾರ್ಡ್ ಳನ್ನು ಬಳಸಿಕೊಂಡು ಡಿಜಿಟಲ್ ಗೇಮಿಂಗ್ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಪಾವತಿಗಳ ಮೇಲೆ ರಿವಾರ್ಡ್ ಪಾಯಿಂಟ್ ಗಳನ್ನು ನೀಡುವುದನ್ನು ಕಂಪನಿ ನಿಲ್ಲಿಸುತ್ತಿದೆ. ಇದರಿಂದ ಗ್ರಾಹಕರಿಗೆ ಯಾವುದೇ ರಿವಾರ್ಡ್ ಪಾಯಿಂಟ್ ಗಳು ಸಿಗುವುದಿಲ್ಲ.



















