ಬೆಂಗಳೂರು: ಬಿಜೆಪಿಯಿಂದಾಗಿ ಈಗ ಧರ್ಮಸ್ಥಳ ಅಶುದ್ಧಿಯಾಗುತ್ತಿದೆ. ಅವರ ರಾಜಕೀಯ ಕುತಂತ್ರಕ್ಕೆ ಧರ್ಮಸ್ಥಳ ಬಲಿ ಆಗಬಾರದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅಭಿಪ್ರಾಯ ಪಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಈ ಪ್ರಕರಣ ಬಿಜೆಪಿಯ ಎರಡು ಗುಂಪಿನ ಆಂತರಿಕ ಕಲಹದಿಂದ ನಡೆಯುತ್ತಿದೆ. ಬಿಜೆಪಿಯವರು ಧರ್ಮಸ್ಥಳ ದುರ್ಬಳಕೆ ಮಾಡಿಕೊಳ್ಳಲು ಬಿಡಬಾರದು. ಹೆಗಡೆ ಅವರು ಇದಕ್ಕೆ ಅವಕಾಶ ಮಾಡಿಕೊಡಬಾರದು. ಅರೆಸ್ಟ್ ಆಗಿರೋರು ಏನು ಹೇಳಿದ್ರು. ಬಿಜೆಪಿಯ ಎರಡು ಗುಂಪಿಗಳ ಮತ್ತು ಅದರ ಸಂಘಟನೆಗಳಿಂದ ಆಗ್ತಿದೆ. ಬಿಜೆಪಿ ಪಾರ್ಟಿ ಅವರೇ ಧರ್ಮಸ್ಥಳದ ಮೇಲೆ ಮಸಿ ಬಳಿಯೋಕೆ ಕೆಲಸ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.


















