ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘದ 49ನೇ ವಾರ್ಷಿಕ ಸಾಮಾನ್ಯ ಸಭೆಯು ಇತ್ತೀಚೆಗೆ ನಡೆಯಿತು.
ನಾಗೂರು ಒಡೆಯರ ಮಠ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಈ ವೇಳೆ ಮಾತನಾಡಿದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಸಂಘದ 49ನೇ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿರುವುದು ಮಹತ್ತರವಾದ ಬೆಳವಣಿಗೆ ಆಗಿದೆ. ಸಂಘದ ಸದಸ್ಯರ ಅನುಕೂಲಕ್ಕಾಗಿ ಹಾಲು ಸಂಗ್ರಹಣಾ ವಾಹನದ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಂಘದ ಮಹಿಳಾ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗಿದೆ. ಆರೋಗ್ಯ ಮಾಹಿತಿ ಸಹಿತ ಉತ್ತಮ ಹಾಲು ಉತ್ಪಾದಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಕೂಡ ಮಾಡಲಾಗಿದೆ ಎಂದರು.

ಸಂಘವು ಪ್ರಸ್ತುತ ಸಾಲಿನಲ್ಲಿ 2,90,000 ರೂ. ಲಾಭ ಗಳಿಸಿದೆ ಅಂತಾ ಹೇಳಿದ ಅವರು, ಹಾಲು ಉತ್ಪಾದಕ ಸದಸ್ಯರಿಗೆ ಶೇ. 65ರಷ್ಟು ಬೋನಸ್ ಹಾಗೂ ಸದಸ್ಯರಿಗೆ ಶೇ. 15ರಷ್ಟು ಡಿವಿಡೆಂಡ್ ಘೋಷಿಸಿದರು. ಹಾಲು ಉತ್ಪಾದನೆಯಲ್ಲಿ ತೊಡಗಿ ಕೊಳ್ಳುವುದರ ಮೂಲಕ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕೆಂದು ಕೇಳಿಕೊಂಡರು.

ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುಣವಂತ ನಾಯರಿ, 2024-25ನೇ ಸಾಲಿನ ವಾರ್ಷಿಕ ವರದಿ ಮಂಡನೆ ಮಾಡಿದರು. ಈ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರಿಗೆ ಉಡುಗೊರೆ ನೀಡಲಾಯಿತು. ಆರೋಗ್ಯ ಮಾಹಿತಿ ಪ್ರಯುಕ್ತ ಸಂಘದ ಸದಸ್ಯರಿಗೆ ಬಿ.ಪಿ ಮತ್ತು ರಕ್ತ ಪರೀಕ್ಷೆ ಮಾಡಲಾಯಿತು. ಒಕ್ಕೂಟದ ವ್ಯವಸ್ಥಾಪಕ ಶಂಕರ್ ನಾಯ್ಕ ಪಶು ಆಹಾರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ವಿಸ್ತಾರಣಾಧಿಕಾರಿ ರಾಜಾರಾಮ್, ಸಂಘದ ಉಪಾಧ್ಯಕ್ಷೆ ಶಾರದ ದೇವಾಡಿಗ, ನಿರ್ದೇಶಕ ಪದ್ಮನಾಭ ಹೆಬ್ಬಾರ್, .ಕೆ ಗೋಪಾಲ ದೇವಾಡಿಗ, ನೀಲು ಯಾನೆ ಸರೋಜಾ, ಸುಬ್ಬು, ಸರೋಜ, ಸುಮಂಗಲ ಕಾರಂತ, ವಿಶಾಲ, ಸಂತೋಷ್ ದೇವಾಡಿಗ, ಪ್ರಕಾಶ್ ನಾಯರಿ, ಶಾಂತದಿನೇಶ್ ಪೂಜಾರಿ, ಪದ್ಮನಾಭ ಹೆಬ್ಬಾರ್, ವಿಶಾಲ ದೇವಾಡಿಗ, ಉಪಾಧ್ಯಕ್ಷೆ ಶಾರದ ಸೇರಿದಂತೆ ಹಲವರು ಇದ್ದರು.