ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಹಳೆಯ ಸುದ್ದಿಯೇನಲ್ಲ. ಕೊತ್ತಲವಾಡಿ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕಿಯಾಗಿ ಅವರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈಗ ವಿಚಾರ ಏನಪ್ಪ ಅಂದ್ರೆ PA ಪ್ರೊಡಕ್ಷನ್ಸ್ ಮೂಲಕ ಅವರ ಸಿನಿ ಜರ್ನಿಯನ್ನು ವಿಸ್ತರಿಸುತ್ತಿದ್ದಾರೆ ಎಂಬುವುದು.

ಹೌದು, ತೆಲುಗಿನ ಘಾಟಿ ಚಿತ್ರವನ್ನು ಪುಷ್ಪಾ ಅವರು ಕನ್ನಡದಲ್ಲಿ ಹಂಚಿಕೆ ಮಾಡಲಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಅನುಷ್ಕಾ ಶೆಟ್ಟಿ ವಿಕ್ರಮ್ ಪ್ರಭು ನಟಿಸುತ್ತಿದ್ದಾರೆ. ಘಾಟಿ’ ಸಿನಿಮಾವನ್ನು ಕ್ರಿಶ್ ಜಗರ್ಲಮುಡಿ ನಿರ್ದೇಶನ ಮಾಡುತ್ತಿದ್ದು, ಸೆಪ್ಟೆಂಬರ್ 5ರಂದು ವಿಶ್ವಾದಾದ್ಯಂತ ತೆರೆಗೆ ಬರಲಿದೆ. ಘಾಟಿ ಸಿನಿಮಾದ ಬಗ್ಗೆ ಅನುಷ್ಕಾ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.



















